ಮಾಹಿತಿಗಾಗಿ ಇವುಗಳ ಮೇಲೆ ದಯವಿಟ್ಟು ಕ್ಲಿಕ್ ಮಾಡಿ
👉ಅಕ್ಷರ ದಾಸೋಹ ಫಲಾನುಭವಿಗಳ ಡೇಟಾ ಎಂಟ್ರಿ ಫೈಲ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಕ್ಷರ ದಾಸೋಹಕ್ಕೆ ಸಂಬಂಧಿಸಿದ ಎಲ್ಲಾ ಆದೇಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
1.ಅಡುಗೆ ಸಾದಿಲ್ವಾರು ಹೆಚ್ಚಳದ ಆದೇಶ ದಿನಾಂಕ 28/09/2016
2.ಅಕ್ಷರ ದಾಸೋಹದ ಸಮುದಾಯ ದತ್ತ ಶಾಲೆ ನಮೂನೆಗಳು
3.MDM message Based monitoring system ಆದೇಶ
4.User Manual for MDM Message Based Monitoring System school level
5.ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಸುರಕ್ಷತಾ ನಿಯಮಗಳು
6.Check SMS status and Report of MDM -Attendance
7.ಅಕ್ಷರ ದಾಸೋಹದ message ಮಾಡುವ ಸಂಬಂಧಿಸಿದ PPt
8.ಅಕ್ಷರ ದಾಸೋಹದ ಅಂಕಿಅಂಶಗಳ ಬಗ್ಗೆ ಸಂಕ್ಷಿಪ್ತ ಚಿತ್ರಣ
9.ಅಕ್ಷರ ದಾಸೋಹದ ಮೆನುಚಾರ್ಟ್ ಮತ್ತು ನೀಡಬೇಕಾದ ದಿನಸಿಗಳ ಪ್ರಮಾಣ
10.ಹಾಲಿನ ಪರಿಮಾಣ ಮತ್ತು ಪರಿವರ್ತನಾ ವೆಚ್ಚ
11.ವಿಶ್ವ ಕೈ ತೊಳೆಯುವ ದಿನ ಆಚರಿಸುವ ಬಗ್ಗೆ ಆದೇಶ
12.ಬಿಸಿಯೂಟದ ದಾಸ್ತಾನು ಲೆಕ್ಕಚಾರ ನಮೂನೆ
===================================
ರಾಜ್ಯದ ಎಲ್ಲ ಸರಕಾರಿ,ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಮಧ್ಯಾಹ್ನದ ಬಿಸಿಯೂಟದ ಮಕ್ಕಳ ಸಂಖ್ಯೆಯನ್ನು ಎಸ್. ಎಂ.ಸ್ ಮಾಡಲು ಕ್ರಮವಹಿಸಲು ಆದೇಶಿಸಿದೆ.
#ಮೆಸೇಜ್ ಕಳುಹಿಸಬೇಕಾದ ಟೋಲ್ ಫ್ರೀ ನಂಬರ್ =15544
#ಮುಖ್ಯ ಶಿಕ್ಷಕರು ತಮ್ಮ ರಿಜಿಸ್ಟರ್ ಡ್ ಮೊಬೈಲ್ ಸಂಖ್ಯೆಯಿಂದ ಮಾತ್ರ ಮೆಸೇಜ್ ಮಾಡಬೇಕು.
#ಮೆಸೇಜ್ ಮಾಡುವ ವಿಧಾನ
KARMDM DD/MM/YYYY,T,S1,S2,S3,S4,S5,S6,S7,S8,S9,S10
*ಮೊದಲು capital lettersನಲ್ಲಿKARMDM ಎಂದು typeಮಾಡಿ space ಕೊಡಿ ನಂತರ
* DD ಎಂಬುದು ದಿನಾಂಕ(2digits)type ಮಾಡಿ /ಹಾಕಿ
MM ಎಂಬುದು ತಿಂಗಳು(2digits)type ಮಾಡಿ/ ಹಾಕಿ
YYYY ಎಂಬುದು ವರ್ಷ(4digits)type ಮಾಡಿ , ಹಾಕಿ
*T ಎಂಬುದು ಆ ದಿನ ಹಾಜರಿರುವ ಶಿಕ್ಷಕರ ಸಂಖ್ಯೆtype ಮಾಡಿ , ಹಾಕಿ
* S1 ಎಂಬುದು ಆ ದಿನ ಹಾಜರಿರುವ ಒಂದನೆಯ ತರಗತಿ ಮಕ್ಕಳ ಸಂಖ್ಯೆ type ಮಾಡಿ , ಹಾಕಿS2 ಎಂಬುದು ಆ ದಿನದ ಎರಡನೇ ತರಗತಿ ಮಕ್ಕಳ ಸಂಖ್ಯೆ type ಮಾಡಿ , ಹಾಕಿ,ಅದೇ ರೀತಿ S3,S4,s5,s6,s7,s8,s9,s10 ಆಯಾ ತರಗತಿ ಮಕ್ಕಳ ಸಂಖ್ಯೆ ಇದನ್ನು type ಮಾಡಿ ನಂತರ ಟೋಲ್ ಫ್ರೀ ಸಂಖ್ಯೆ15544 ಗೆ ಮೆಸೇಜ್ ಮಾಡಿ.
ಉದಾ-1.
LPS(1ರಿಂದ 5)
ದಿನಾಂಕ:14/12/2016
ಹಾಜರಿದ್ದ ಶಿಕ್ಷಕರ ಸಂಖ್ಯೆ=2
ಊಟ ಮಾಡುವ ಮಕ್ಕಳ ಸಂಖ್ಯೆ
1ನೇ ತ=10
2ನೇ ತ=12
3ನೇ ತ=8
4ನೇ ತ=9
5ನೇ ತ=15
KDRMDM 14/12/2016,2,10,12,8,9,15,0,0,0,0,0
ಉದಾ-2
ಉದಾ-2
HPS (1ರಿಂದ 7)
ಹಾಜರಿದ್ದ ಶಿಕ್ಷಕರ ಸಂಖ್ಯೆ=8
ಊಟ ಮಾಡುವ ಮಕ್ಕಳ ಸಂಖ್ಯೆ
1ನೇ=30
2ನೇ=35
3ನೇ=38
4ನೇ=32
5ನೇ=30
6ನೇ=34
7ನೇ=36
KDRMDM 14/12/2016,8,30,35,38,32,30,34,36,0,0,0
ಉದಾ-3
ಉದಾ-3
HPS(1ರಿಂದ 8)
ಹಾಜರಿದ್ದ ಶಿಕ್ಷಕರ ಸಂಖ್ಯೆ=11
1ನೇ=40
2ನೇ=50
3ನೇ=35
4ನೇ=42
5ನೇ=40
6ನೇ=37
7ನೇ=44
8ನೇ=51
KDRMDM 14/12/2016,11,40,50,35,42,40,37,44,51,0,0
ಉದಾ-4
ಉದಾ-4
HS (8ರಿಂದ 10)
ಹಾಜರಿದ್ದ ಶಿಕ್ಷಕರ ಸಂಖ್ಯೆ=8
8ನೇ=46
9ನೇ=52
10ನೇ=48
KDRMDM 14/12/2016,8,0,0,0,0,0,0,0,46,52,48
ಸಂದೇಹಗಳದ್ದಲ್ಲಿ ಸಂಬಂಧಪಟ್ಟ CRP, BRP, ECO ರವರನ್ನು ಸಂಪರ್ಕಿಸಲು ಕೋರಲಾಗಿದೆ
==============================================ಸಂದೇಹಗಳದ್ದಲ್ಲಿ ಸಂಬಂಧಪಟ್ಟ CRP, BRP, ECO ರವರನ್ನು ಸಂಪರ್ಕಿಸಲು ಕೋರಲಾಗಿದೆ
ಬಿಸಿಯೂಟ ತಯಾರಿಕೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳು.
★ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕೆ ಈ ಕೆಳ ಕಾಣಿಸಿದ ಅಂಶಗಳನ್ನುಅಳವಡಿಸಿಕೊಳ್ಳುವುದು.
*************************************************
*************************************************
★ಮುಖ್ಯ ಶಿಕ್ಷಕರು ಸರಕಾರಿ ರಜೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ಷರದಾಸೋಹ ಕಾರ್ಯಕ್ರಮ ನಿಲ್ಲದಂತೆ ಮುಂಜಾಗ್ರತೆವಹುಸಬೇಕು.
★ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಅಗತ್ಯವಿರುವ ಆಹಾರ ಮತ್ತು ಸಾದಿಲ್ವಾರು ಬೇಡಿಕೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಹಿಂದಿನ ತಿಂಗಳ ಉಪಯೋಗತಾ ಪ್ರಮಾಣಪತ್ರದೊಂದಿಗೆ ಪ್ರತಿ ತಿಂಗಳು 25 ನೇ ತಾರೀಖಿನೊಳಗಾಗಿ ತಾಲೂಕು ಕಛೇರಿಗೆ ತಲುಪಿಸಬೇಕು.
★ನಿಗದಿತ ಅವಧಿಯಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದಲ್ಲಿ,ಸ್ಥಳಿಯವಾಗಿ ಲಭ್ಯವಾಗುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಮಕ್ಕಳು ಹಸಿವಿನಿಂದ ಉಳಿಯಬಾರದು.
★ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಸ್ವೀಕರಿಸಬಾರದು.ಹಾಗೂ ಒಂದು ವೇಳೆ ಕಳಪೆ ಮಟ್ಟದ ಆಹಾರ ಸಾಮಗ್ರಿ ಬಳಸಿ ಬಿಸಿಊಟ ತಯಾರಿಸಬಾರದು.
★ಪ್ರತಿ ತಿಂಗಳು ಪಡೆದ ಆಹಾರ ಧಾನ್ಯಗಳು ಕೆಡದಂತೆ ಶೇಕರಿಸಿಟ್ಟುಕೊಳ್ಳಬೇಕು.
★ನಮೂನೆ-2 ರಲ್ಲಿದ್ದ ಆಹಾರ ದಾಸ್ತಾನಿಗೂ ಹಾಗೂ ಭೌತಿಕ ದಾಸ್ತಾನಿಗೂ ತಾಳೆಯಾಗಬೇಕು.ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.
★ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ,ಎಲ್ಲಾ ಮಾಹಿತಿಗಳನ್ನು/ವಹಿಗಳನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿದಿನ ಮಕ್ಕಳಿಗೆ ಆಹಾರ ವಿತರಿಸುವ ಮುಂಚೆ ಇಬ್ಬರು ಶಿಕ್ಷಕರು ಆಹಾರ ಸೇವಿಸಿ ಉತ್ತಮ ಗುಣಮಟ್ಟದ ಆಹಾರವೆಂದು ದೃಢೀಕರಿಸಿದ ನಂತರ ವಹಿಯಲ್ಲಿ ದಾಖಲಿಸಿ ಮಕ್ಕಳಿಗೆ ವಿತರಿಸಬೇಕು.
★ಅನಿಲ ಸಿಲಿಂಡರನ್ನು ಮಿತವಾಗಿ ಬಳಸಬೇಕು.ಸಿಲಿಂಡರ್ ಸ್ವೀಕರಿಸುವಾಗ ರಿಜಿಸ್ಟರ್ ನಂಬರ್ ಬರೆದುಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.
★ಮಾತ್ರೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು.ಹಾಗೂ ವರ್ಗವಾರು ನೀಡಿದ ಮಾತ್ರೆಗಳ ದಾಖಲೆಗಳನ್ನಿಡಬೇಕು.
★ತಾಯಂದಿರ ಸಮೀತಿಯನ್ನು ರಚಿಸಿ ವಾರ್ಷಿಕ ವೇಳಾಪಟ್ಟುಯಂತೆ ಕನಿಷ್ಟ 4 ಜನ ತಾಯಂದಿರು ಸರದಿಯ ಮೇಲೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವುದು.
★ಮಕ್ಕಳಿಗೆ ಬಿಸಿಯೂಟ ವಿತರಿಸುವಾಗ ಎಲ್ಲ ಶಿಕ್ಷಕರು ತಪ್ಪದೇ ಹಾಜರಿದ್ದು,ಶಿಸ್ತಿನಿಂದ ವ್ಯವಸ್ಥಿತವಾಗಿ ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.
★ಅಡುಗೆ ಕೋಣೆಯನ್ನು ಪಾತ್ರೆಪರೀಕರಗಳನ್ನು ಅಡುಗೆ ಪ್ರಾರಂಭದ ಮುನ್ನ ಮತ್ತು ಮುಗಿದ ನಂತರ ಸ್ವಚ್ಚಗೊಳುಸಬೇಕು.
★ಪ್ರತಿ ಶಾಲೆಯಲ್ಲಿ ಶಾಲಾ ಕೈತೋಟ ನಿರ್ವಹಿಸಬೇಕು.
ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.
ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.
★ಅಕ್ಷರದಾಸೋಹ ಕಾರ್ಯಕ್ರಮದಡಿ ಖರ್ಚುಮಾಡಿದ ಪ್ರತಿಯೊಂದು ಅನುದಾನಕ್ಕೆ ಓಚರ್ಗಳನ್ನು ನಿಯಮಾನುಸಾರ ನಿರ್ವಹಿಸಿ ನಗದು ಪುಸ್ತಕವನ್ನು ಪ್ರತಿನಿತ್ಯ ನಿರ್ವಹಿಸಬೇಕು.
★ಪ್ರತಿವರ್ಷದ ಕೊನೆಗೆ ಅಕ್ಷರ ದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
★ರಜಾ ದಿನಗಳಲ್ಲಿ ಸಿಲಿಂಡರಗಳು ಹಾಗೂ ಆಹಾರ ಧಾನ್ಯಗಳು ಕಳ್ಳತನವಾಗದಂತೆ ಮುಂಜಾಗ್ರತೆವಹಿಸಬೇಕು.
★ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜೆಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಉಳಿಯದಂತೆ ಬೇಡಿಕೆಯನ್ನು ಸಲ್ಲಿಸಬೇಕು.ಬೇಡಿಕೆಯಿಲ್ಲದಿದ್ದರೂ ಶೂನ್ಯವರದಿಯನ್ನು ಸಲ್ಲಿಸಬೇಕು.
★ದಾನಿಗಳ ಮನವೊಲಿಸಿ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಬೇಕಾಗುವ ಕುಕ್ಕರ್,ತಟ್ಟೆ,ಲೋಟ,ಬಕೀಟ
ಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.
ಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.
★ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಸಾದಿಲ್ವಾರುಗಳನ್ನು ಬಳಸಬೇಕು.
★ಆಹಾರ ಧಾನ್ಯಗಳನ್ನು ಲಾರಿಗಳಿಂದ ಪಡೆಯುವಾಗ ತೂಕ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
★ಖಾಲಿ ಚೀಲಗಳ ಬಗ್ಗೆ ಲೆಕ್ಕ-ಪತ್ರ ಇಟ್ಟು ನಿಯಮಾನಯಸಾರ ಕ್ರಮ ಕೈಗೊಳ್ಳಬೇಕು. ಖಾಲಿ ಚೀಲ ಮಾರಾಟದ ಹಣವನ್ನು ಕಡ್ಡಾಯವಾಗಿ ಅಕ್ಷರದಾಸೋಹ ಖಾತೆಗೆ ಜಮಾ ಮಾಡಬೇಕು.
★ಮುಖ್ಯಶಿಕ್ಷಕರು ಕಡ್ಡಾಯವಾಗಿ ಅಡುಗೆ ಸಿಬ್ಬಂದಿಗಳ ವೇತನವನ್ನು ಚೆಕ್ ಮೂಲಕ ಪಾವತಿಸತಕ್ಕದ್ದು.
*************************************************
★ಬಿಸಿಯೂಟಕ್ಕೆ ಸಂಬಂದಿಸಿದ ಪ್ರಮುಖ ದಾಖಲೆಗಳು
*************************************************
*************************************************
1★ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
*************************************************
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
*************************************************
ಶಾಲಾ ಹಂತದಲ್ಲಿ ನಿರ್ವಹಿಸುವ ಸಾಮಾನ್ಯ ದಾಖಲೆಗಳು
1 ರಿಂದ 5 ನೇ ತರಗತಿಯವರೆಗೆ
***************************
★ಅಕ್ಕಿ/ಗೋಧಿ-100 ಗ್ರಾಂ
★ತೊಗರಿ ಬೇಳೆ 20 ಗ್ರಾಂ
★ತಾಳೆ ಎಣ್ಣೆ-05 ಗ್ರಾಂ
★ಉಪ್ಪು-02 ಗ್ರಾಂ
★ತರಕಾರಿ-50 ಗ್ರಾಂ
★ತರಕಾರಿ-1 ರೂ
★ಹಾಲಿನ ಪುಡಿ-18 ಗ್ರಾಂ-150 ಮಿ.ಲೀ.ಹಾಲು
★ಸಕ್ಕರೆ 10 ಗ್ರಾಂ
★ಕ್ಷೀರ—50 ಪೈಸೆ(ಸಕ್ಕರೆ-ಗೊಡಂಬಿ)
★ಬೇಯಿಸಿದ ಆಹಾರ-450 ಗ್ರಾಂ
★ವರ್ಷಕ್ಕೆರಡು ಮಾತ್ರೆ-400mg-Allbendojole
★ವಾರಕ್ಕೆ 3 ಮಾತ್ರೆ-20mg-36 ವಾರ ನೀಡಬೇಕು.
(Iren and polic acid)
***************************
***************************
★ಅಕ್ಕಿ/ಗೋಧಿ-100 ಗ್ರಾಂ
★ತೊಗರಿ ಬೇಳೆ 20 ಗ್ರಾಂ
★ತಾಳೆ ಎಣ್ಣೆ-05 ಗ್ರಾಂ
★ಉಪ್ಪು-02 ಗ್ರಾಂ
★ತರಕಾರಿ-50 ಗ್ರಾಂ
★ತರಕಾರಿ-1 ರೂ
★ಹಾಲಿನ ಪುಡಿ-18 ಗ್ರಾಂ-150 ಮಿ.ಲೀ.ಹಾಲು
★ಸಕ್ಕರೆ 10 ಗ್ರಾಂ
★ಕ್ಷೀರ—50 ಪೈಸೆ(ಸಕ್ಕರೆ-ಗೊಡಂಬಿ)
★ಬೇಯಿಸಿದ ಆಹಾರ-450 ಗ್ರಾಂ
★ವರ್ಷಕ್ಕೆರಡು ಮಾತ್ರೆ-400mg-Allbendojole
★ವಾರಕ್ಕೆ 3 ಮಾತ್ರೆ-20mg-36 ವಾರ ನೀಡಬೇಕು.
(Iren and polic acid)
***************************
6 ರಿಂದ 10 ನೇ ತರಗತಿಯವರೆಗೆ
*****************************
*****************************
★ಅಕ್ಕಿ/ಗೋಧಿ—150 ಗ್ರಾಂ
★ತೊಗರಿ ಬೇಳೆ—30 ಗ್ರಾಂ
★ತಾಳೆ ಎಣ್ಣೆ—7.5 ಗ್ರಾಂ
★ಉಪ್ಪು—4 ಗ್ರಾಂ
★ತರಕಾರಿ—75 ಗ್ರಾಂ
★ತರಕಾರಿ—
★ಬೇಯಿಸಿದ ಆಹಾರ—650 ಗ್ರಾಂ
★ವರ್ಷಕ್ಕೆರಡು ಮಾತ್ರೆ—2 Vitamin A(20mg)
★ವರ್ಷಕ್ಕೆರೆಉ ಮಾತ್ರೆ-2-Allbendojole
★ವಾರಕ್ಕೆ 1 ಮಾತ್ರೆ—Iren and polic acide
**************************************
★ತೊಗರಿ ಬೇಳೆ—30 ಗ್ರಾಂ
★ತಾಳೆ ಎಣ್ಣೆ—7.5 ಗ್ರಾಂ
★ಉಪ್ಪು—4 ಗ್ರಾಂ
★ತರಕಾರಿ—75 ಗ್ರಾಂ
★ತರಕಾರಿ—
★ಬೇಯಿಸಿದ ಆಹಾರ—650 ಗ್ರಾಂ
★ವರ್ಷಕ್ಕೆರಡು ಮಾತ್ರೆ—2 Vitamin A(20mg)
★ವರ್ಷಕ್ಕೆರೆಉ ಮಾತ್ರೆ-2-Allbendojole
★ವಾರಕ್ಕೆ 1 ಮಾತ್ರೆ—Iren and polic acide
**************************************
★ಶಾಲಾ ಮಕ್ಕಳಿಗೆ ವೈಧ್ಯಕೀಯ ತಪಾಸನೆ ಮಾಡಿಸಬೇಕು.
★ಮುಖ್ಯ ಅಡುಗೆಯವರ ಸಂಬಳ—1600+100=1700
★ಸಹಾಯಕ ಅಡುಗೆಯವರಿಗೆ—1500+100=1600
★ಸೋಮವಾರ-ಗುರುವಾರ—ಅನ್ನಸಾಂಬಾರು
★ಶುಕ್ರವಾರ-ಚಿತ್ರನ್ನ/ಶನಿವಾರ-ಉಪ್ಪಿಟ್ಟು
★ಹಾಲು-ಸೋಮ-ಬುಧ-ಶನಿ-3 days in 1 week
★ಅಡುಗೆ ಸಿಬ್ಬಂದಿ ಎಪ್ರಾನ ಧರಿಸುವುದು ಕಡ್ಡಾಯ.
★ಅಡುಗೆಯವರು ಆರೋಗ್ಯವಂತರಾಗಿರುವ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ವೈಧ್ಯಕೀಯ ಪ್ರಮಾಣಪತ್ರ ಪಡೆಯುವುದು.
★ಮುಖ್ಯ ಅಡಯಗೆಯವರು ಬರೆದ ಲೆಕ್ಕಪತ್ರಗಳನ್ನು ಪರಿಶಿಲಿಸಿ ಮು.ಗು.ಸಹಿ ಮಾಡುವುದು.
★ಮುಖ್ಯಗುರುಗಳು ಅಕ್ಷರದಾಸೋಹಕ್ಕೆ ಹಾಗೂ ಕ್ಷೀರಭಾಗ್ಯಯೋಜನೆಗೆ ಮಾರ್ಗದರ್ಶಕರಾಗಿರುತ್ತಾರೆ.
★ಅಗ್ ಮಾರ್ಕ ಬಗ್ಗೆ ಗಮನವಿರಬೇಕು.
★ಖಾಲಿ ಗೋಣಿ ಚೀಲಗಳನ್ನು ಹರಾಜು ಮಾಡಿ ಆ ದುಡ್ಡನ್ನು ಅಕ್ಷರದಾಸೋಹ ಖಾತೆಗೆ ಜಮಾ ಮಾಡಿ ಮಕ್ಕಳಿಗೆ ಬೇಕಾದ ಸಾಮಾನುಗಳನ್ನು ಖರೀದಿಸಬೇಕು.
★ಆಹಾರ ದಾಸ್ತಾನು ತೂಕ ಮಾಡಿದ ನಂತರ ಆಹಾರ ತಯಾರಿಸಬೇಕು.
★ತರಕಾರಿಯನ್ನು ಕೊಂಡು ತರುವುದು ಮುಖ್ಯ ಅಡುಗೆಯವರ ಕರ್ತವ್ಯವಾಗಿರುತ್ತದೆ.
★ತರಕಾರಿ ತಂದಿರುವ ಬಗ್ಗೆ ಮುಖ್ಯ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು.
*************************************************
★ಮುಖ್ಯ ಅಡುಗೆಯವರ ಸಂಬಳ—1600+100=1700
★ಸಹಾಯಕ ಅಡುಗೆಯವರಿಗೆ—1500+100=1600
★ಸೋಮವಾರ-ಗುರುವಾರ—ಅನ್ನಸಾಂಬಾರು
★ಶುಕ್ರವಾರ-ಚಿತ್ರನ್ನ/ಶನಿವಾರ-ಉಪ್ಪಿಟ್ಟು
★ಹಾಲು-ಸೋಮ-ಬುಧ-ಶನಿ-3 days in 1 week
★ಅಡುಗೆ ಸಿಬ್ಬಂದಿ ಎಪ್ರಾನ ಧರಿಸುವುದು ಕಡ್ಡಾಯ.
★ಅಡುಗೆಯವರು ಆರೋಗ್ಯವಂತರಾಗಿರುವ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ವೈಧ್ಯಕೀಯ ಪ್ರಮಾಣಪತ್ರ ಪಡೆಯುವುದು.
★ಮುಖ್ಯ ಅಡಯಗೆಯವರು ಬರೆದ ಲೆಕ್ಕಪತ್ರಗಳನ್ನು ಪರಿಶಿಲಿಸಿ ಮು.ಗು.ಸಹಿ ಮಾಡುವುದು.
★ಮುಖ್ಯಗುರುಗಳು ಅಕ್ಷರದಾಸೋಹಕ್ಕೆ ಹಾಗೂ ಕ್ಷೀರಭಾಗ್ಯಯೋಜನೆಗೆ ಮಾರ್ಗದರ್ಶಕರಾಗಿರುತ್ತಾರೆ.
★ಅಗ್ ಮಾರ್ಕ ಬಗ್ಗೆ ಗಮನವಿರಬೇಕು.
★ಖಾಲಿ ಗೋಣಿ ಚೀಲಗಳನ್ನು ಹರಾಜು ಮಾಡಿ ಆ ದುಡ್ಡನ್ನು ಅಕ್ಷರದಾಸೋಹ ಖಾತೆಗೆ ಜಮಾ ಮಾಡಿ ಮಕ್ಕಳಿಗೆ ಬೇಕಾದ ಸಾಮಾನುಗಳನ್ನು ಖರೀದಿಸಬೇಕು.
★ಆಹಾರ ದಾಸ್ತಾನು ತೂಕ ಮಾಡಿದ ನಂತರ ಆಹಾರ ತಯಾರಿಸಬೇಕು.
★ತರಕಾರಿಯನ್ನು ಕೊಂಡು ತರುವುದು ಮುಖ್ಯ ಅಡುಗೆಯವರ ಕರ್ತವ್ಯವಾಗಿರುತ್ತದೆ.
★ತರಕಾರಿ ತಂದಿರುವ ಬಗ್ಗೆ ಮುಖ್ಯ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು.
*************************************************
ಅಡುಗೆ ಸಿಬ್ಬಂದಿ ದಿನಚರಿ
★9:30 ಕ್ಕೆ ಶಾಲೆಗೆ ಹಾಜರಾಗುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.
★ಬೆಳಿಗ್ಗೆ 10:30 ರಿಂದ 11:00—ಮುಖ್ಯ ಅಡುಗೆಯವರು ತರಗತಿವಾರು ಹಾಜರಾತಿ ಮತ್ತು ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯನ್ನು ನಮೂದಿಸಿ ತರಗತಿ ಶಿಕ್ಷಕರಿಂದ ಸಹಿ ತೆಗೆದುಕೊಳ್ಳುವುದು.
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು.
*************************************************
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು.
*************************************************
ಮುಖ್ಯ ಹಾಗೂ ಸಹಾಯಕ ಅಡುಗೆಯವರ ಕರ್ತವ್ಯಗಳು.
★ಅಡುಗೆ ಕೇಂದ್ರದ ಉತ್ತಮ ನಿರ್ವಹಣೆಯು /ಸ್ವಚ್ಚತೆ ಮುಖ್ಯ ಅಡುಗೆಯವರ ಜವಾಬ್ದಾರಿಯಾಗಿರುತ್ತದೆ.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.
ಮುಖ್ಯ ಶಿಕ್ಷಕರ ಜವಾಬ್ದಾರಿಗಳು
★ಆಹಾರ ಧಾನ್ಯಗಳ ಬಳಕೆ ಪ್ರಮಾಣ ಪತ್ರ/ಬೇಡಿಕೆ ಪ್ರಮಾಣ ಪತ್ರ ಅಕ್ಷರದಾಸೋಹ ಅಧಿಕಾರಿಗಳಿಗೆ ಸಲ್ಲಿಕೆ
★ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
★ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
★ತಾಯಂದಿರ ಸಮೀತಿ ರಚಿಸಬೇಕು.
★ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
★ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
★ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
★ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
★ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
★ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
★ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.
★ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
★ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈಜೋಡಿಸಬೇಕು.
★ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
★ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
★ತಾಯಂದಿರ ಸಮೀತಿ ರಚಿಸಬೇಕು.
★ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
★ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
★ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
★ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
★ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
★ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
★ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.
★ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
★ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈಜೋಡಿಸಬೇಕು.
————————————-
*ಶಾಲಾ ಬಿಸಿಯೂಟ ತಯಾರಿಕೆಯಲ್ಲಿ ಎಚ್ಚರವಹಿಸಿ-
*ಶಾಲಾ ಕೆಲಸದ ದಿನಗಳಲ್ಲಿ (ಪರೀಕ್ಷಾ ದಿನಗಳನ್ನು ಸೇರಿಸಿ) ಹಾಗೂ ರಾಷ್ಟ್ರೀಯ ಹಬ್ಬಗಳು, ಸರಕಾರದಿಂದ ಆಚರಿಸಲಾಗುತ್ತಿರುವ ಗಣ್ಯರ ಜನ್ಮ ದಿನಗಳಂದು ತಪ್ಪದೇ ಬಿಸಿಯೂಟ ನೀಡಬೇಕು.
*ಅಪೌಷ್ಠಿಕತೆ ನಿವಾರಿಸಲು ವಿದ್ಯಾರ್ಥಿಗಳಿಗೆಪೌಷ್ಠಿಕಾಂಶ ಮಾತ್ರೆಗಳನ್ನು ನೀಡಲಾಗುತ್ತಿದ್ದು, ನಿಗದಿಪಡಿಸಿರುವ ದಿನಗಳಲ್ಲಿ ನಿಗದಿತ ಪ್ರಮಾಣದಲ್ಲಿ ನೀಡಬೇಕು. ಹೀಗೆ ಮಾತ್ರೆಗಳನ್ನು ನೀಡುವಾಗ ಮಾತ್ರೆಯ ಅವಧಿ ಮುಕ್ತಾಯದ ದಿನಾಂಕವನ್ನು ಕಡ್ಡಾಯವಾಗಿ ಪರಿಶೀಲಿಸಿದ ನಂತರವಷ್ಟೇ ವಿದ್ಯಾರ್ಥಿಗಳಿಗೆನೀಡಬೇಕು. ಇಲಾಖೆಯಿಂದ ಸರಬುರಾಜು ಮಾಡಿರುವ ಮಾತ್ರೆಗಳನ್ನು ನಿಯಮಾನುಸಾರ ಮಕ್ಕಳು ಊಟ ಮಾಡಿದ ನಂತರ ಕಡ್ಡಾಯವಾಗಿ ವಿತರಣೆಮಾಡಬೇಕು. ಯಾವುದೇ ಕಾರಣಕ್ಕೂ ಊಟಕ್ಕಿಂತ ಮೊದಲು ಮಾತ್ರೆಗಳನ್ನು ಮಕ್ಕಳಿಗೆ ವಿತರಿಸಬಾರದು. ಈ ನಿಟ್ಟಿನಲ್ಲಿ ಎಚ್ಚರಿಕೆ ವಹಿಸಬೇಕು. ಶಾಲೆಯಲ್ಲಿ ಮುಂಜಾಗೃತ ಕ್ರಮವಾಗಿ ತುರ್ತು ಚಿಕಿತ್ಸೆಗೆ ಎಮರ್ಜೆನ್ಸಿ ಮೆಡಿಕಲ್ ಪ್ಲಾನ್ ಕಡ್ಡಾಯವಾಗಿ ವ್ಯವಸ್ಥೆ ಮಾಡಿ ಇರಿಸಿಕೊಳ್ಳಬೇಕು.ಈ ವಿವರವನ್ನು ಶಾಲೆಯ ಗೋಡಯ ಮೇಲೆ ಬರೆಸಬೇಕು. ಅಲ್ಲದೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು.ಪ್ರತಿ ವರ್ಷ ನಡೆಸುವ ರೀತಿಯಲ್ಲಿಯೇ, ಎಲ್ಲಾ ಮಕ್ಕಳನ್ನು ಶಾಲೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು. ಹಾಗೂ ತಪಾಸಣೆಗಾಗಿ ಬಂದ ತಂಡದಿಂದಲೇ ಶಾಲಾ ಅಡುಗೆ ಸಿಬ್ಬಂದಿಯ ಆರೋಗ್ಯ ತಪಾಸಣೆ ಮಾಡಿಸಬೇಕು.
* ಶಾಲಾ ಕೈತೋಟದಲ್ಲಿ ಬೆಳೆಯುವ ಹಸಿರು ಸೊಪ್ಪು, ತರಕಾರಿಗಳನ್ನು ಬಿಸಿಯೂಟ ಕಾರ್ಯಕ್ರಮಕ್ಕೆ ನಿಗದಿಪಡಿಸಿರುವ ಅವಕಾಶಗಳ ಜೊತೆಗೆ ಹೆಚ್ಚುವರಿಯಾಗಿ ಬಳಸುವದು. ಅವಕಾಶವಿರುವಡೆ ಶಾಲಾ ಕೈ ತೋಟವನ್ನು ಬೆಳೆಸಿ ಸಂರಕ್ಷಿಸುವುದು. ಅಡುಗೆ ತಯಾರಿಸಲು ಸ್ವಚ್ಛ ಹಾಗೂ ತಾಜಾ ತರಕಾರಿ, ಸೊಪ್ಪುಗಳನ್ನು ಮಾತ್ರ ಬಳಸಬೇಕು.
*ಅಡುಗೆ ಅನಿಲ ಸಿಲಿಂಡರ ಉಪಯೋಗಿಸಿ ಅಡುಗೆಯವರು ಬಿಸಿಯೂಟ ತಯಾರು ಮಾಡುವಾಗ ಕಡ್ಡಾಯವಾಗಿ ಏಫ್ರಾನ್ ಧರಿಸಿಯೇ ಜಾಗ್ರತೆ ಮತ್ತು ಸುರಕ್ಷತೆಯಿಂದ ತಯಾರಿಸಬೇಕು.
*ಕುಕ್ಕರ್ ಬಳಕೆ ಮಾಡಿ ಅಡುಗೆ ತಯಾರಿಸುವ ಶಾಲೆಗಳ ಮುಖ್ಯ ಶಿಕ್ಷಕರು/ ಶಿಕ್ಷಕರು/ಅಡುಗೆ ಸಿಬ್ಬಂದಿ ಕುಕ್ಕರಿನ ಸೇಪ್ಟಿ ವಾಲ್, ಗ್ಯಾಸಕೇಟ್, ವ್ಹಿಸಿಲ್ ಅನ್ನು ಆಗಾಗ್ಗೆ ನಿಯಮಿತವಾಗಿ ಪರಿಶೀಲಿಸುತ್ತಿರಬೇಕು. ಹವೆ ಪೂರ್ಣ ಹೋದ ನಂತರವೇ ಕುಕ್ಕರ್ ಮುಚ್ಚಳ ತೆರೆಯುವ ವಿಧಾನ ಅಳವಡಿಸಿಕೊಳ್ಳಬೇಕು.
* ಮುಖ್ಯೋಪಾದ್ಯಾಯರುಹಾಗೂ ಸಹ ಶಿಕ್ಷಕರು ಹಾಲು, ಆಹಾರದ ಗುಣಮಟ್ಟ, ರುಚಿ, ಶುಚಿತ್ವ ಇತ್ಯಾದಿಗಳನ್ನು ಪ್ರತಿ ದಿನ ಇಬ್ಬರು ಶಿಕ್ಷಕರಂತೆ ಸರದಿ ಪ್ರಕಾರ ಆಹಾರದ ರುಚಿ ನೋಡಿ, ಮಕ್ಕಳು ಸೇವಿಸಲು ಯೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡು,ಊಟದ ಬಗ್ಗೆ ವಹಿಯಲ್ಲಿ ದಾಖಲಿಸಬೇಕು.
* ಶಾಲೆಯಲ್ಲಿ ಸಂಗ್ರಹವಿರುವ ಆಹಾರ ಧಾನ್ಯಗಳನ್ನು ಬಳಸುವಾಗ, ಎಫ್ಐಎಫ್ಓ (ಈiಡಿsಣ Iಟಿ ಈiಡಿsಣ ಔuಣ) ಮಾದರಿಯಂತೆ ಮೊದಲು ಬಂದ ಆಹಾರ ಧಾನ್ಯಗಳನ್ನು ಮೊದಲು ಬಳಸಿ ನಂತರ ಬಂದ ಆಹಾರ ಧಾನ್ಯಗಳನ್ನು ನಂತರ ಬಳಸಬೇಕು.
*ಅಡುಗೆ ತಯಾರಿಕೆಗೆ ಸಂಗ್ರಹ ಮಾಡುವ ನೀರಿನ ತೊಟ್ಟಿ/ಟ್ಯಾಂಕಗಳನ್ನು ತಿಂಗಳಿಗೆ 2 ಬಾರಿ ಸ್ವಚ್ಛವಾಗಿ ತೊಳೆದು ನೀರನ್ನು ಸಂಗ್ರಹಿಸಿ, ಯಾವುದೇ ಕ್ರಿಮಿ-ಕೀಟಗಳನ್ನು ಬೀಳದಂತೆ ಮುಚ್ಚಳಿಕೆಯಿಂದ ರಕ್ಷಿಸುವುದು.
* ಆಹಾರ ಧಾನ್ಯಗಳನ್ನು ಕೆಡಲಾರದಂತೆ ಕಟ್ಟಿಗೆಯ ಹಲಗೆಯ ಮೇಲೆ ಸಂಗ್ರಹಿಸಿಡಬೇಕು.
*ಪ್ರತಿ ತಿಂಗಳು ಕಡ್ಡಾಯವಾಗಿ 25 ನೇ ತಾರಿಖಿನೊಳಗಾಗಿ ಆಹಾರಧಾನ್ಯದ ಬೇಡಿಕೆ, 3 ನೇ ತಾರಿಖೀನೊಳಗಾಗಿ ಬಳಕೆ, ಅಡುಗೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ ಹಾಜರಾತಿ ಪತ್ರ ಹಾಗೂ ಎಂ.ಐ.ಎಸ್. ಮಾಹಿತಿಯನ್ನು ಸಿ.ಆರ್.ಪಿ. ಯವರ ಮೂಲಕ ಕಾರ್ಯಾಲಯಕ್ಕೆ ಸಲ್ಲಿಸಬೇಕು.
* ಪ್ರತಿ ದಿನ ಮಕ್ಕಳ ಸಂಖ್ಯೆಗೆಅನುಗುಣವಾಗಿ ಆಹಾರ ಧಾನ್ಯಗಳು, ತರಕಾರಿ, ಸಾಂಬಾರ ಪದಾರ್ಥಗಳನ್ನು ಉಪಯೋಗಿಸಿ ಸ್ವಚ್ಛತೆ ಹಾಗೂ ಸುರಕ್ಷತೆಯಿಂದರುಚಿಕಟ್ಟಾಗಿ ಅಡುಗೆ ತಯಾರಿಸಬೇಕು.
*ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಮೆನು ಚಾರ್ಟನ್ನು ಹಾಕಿ ಅದರಂತೆಯೇ ಕ್ರಮವಹಿಸಬೇಕು.
*ಪ್ರತಿ ದಿನ ಎಲ್ಲಾ ಮಕ್ಕಳಿಗೆ ಊಟ ಬಡಿಸುವಾಗ ಮುಖ್ಯ ಶಿಕ್ಷಕರು ಸೇರಿದಂತೆ ಎಲ್ಲಾ ಶಿಕ್ಷಕರು ಹಾಜರಿದ್ದು ಸುರಕ್ಷಿತವಾಗಿ ಹಾಗೂ ಶಿಸ್ತಿನಿಂದ ಊಟ ಮಾಡಿಸಬೇಕು.
* ಯಾವುದೇಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.
*ಪ್ರತಿ ದಿನ ಊಟಕ್ಕೆ ಮುಂಚೆ ಹಾಗೂ ಊಟದ ನಂತರ ಮಕ್ಕಳು ಕೈತೊಳೆಯ ಬೇಕು. ಕೈ ತೊಳೆಯಲು ಸಾಬೂನು ವ್ಯವಸ್ಥೆ ಮಾಡಬೇಕು. ಮಕ್ಕಳು ಕೈ ತೊಳೆಯಲು 20 ಮಕ್ಕಳಿಗೆ ಒಂದು ನಳದಂತೆ ಕಟ್ಟೆ ನಿರ್ಮಿಸಿಕೊಳ್ಳಬೇಕು. ಕಟ್ಟೆ ನಿರ್ಮಿಸಲು ಶಾಲಾ ಅನುದಾನ/ನಿರ್ವಹಣಾ ವೆಚ್ಚ/ದಾನಿಗಳ ಸಹಾಯವನ್ನು ಪಡೆಯಬಹುದಾಗಿದೆ.
*ಅಡುಗೆ ತಯಾರಿಸಲು ಸ್ವಚ್ಛ ಹಾಗೂ ಶುದ್ದವಾದ ನೀರನ್ನು ಬಳಸಬೇಕು. ಯಾವ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕವಿರುತ್ತದೆಯೋ ಆಯಾ ಶಾಲೆಗಳ ಮುಖ್ಯೋಪಾದ್ಯಾಯರು ಸಂಭಂದಿಸಿದ ಗ್ರಾಮ ಪಂಚಾಯತಗೆ ಪತ್ರ ನೀಡಿ ಮಕ್ಕಳಿಗೆ ಉಚಿತವಾಗಿ ಕುಡಿಯುವ ನೀರಿನ ಸೌಲಭ್ಯವನ್ನು ಪಡೆದುಕೊಳ್ಳುವಂತೆಈಗಾಗಲೆ ಸೂಚನೆ ನೀಡಲಾಗಿದೆ.
*ಈ ಹಿಂದೆ ತಿಳಿಸಿದಂತೆ 1 ರಿಂದ 10 ನೇ ತರಗತಿಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ( ಸೋಮವಾರ, ಬುಧವಾರ, ಶನಿವಾರ ) 18 ಗ್ರಾಂ ಹಾಲಿನ ಪುಡಿಯಿಂದ ಹಾಲು ತಯಾರಿಸಿ ವಿತರಿಸಬೇಕು. ಒಂದು ವೇಳೆ ಹಾಲಿನ ಪುಡಿ ಮುಗಿದಲ್ಲಿ ಬೇರೆ ಶಾಲೆಯಿಂದ ಕಡ ತಂದು ಹಾಲು ತಯಾರಿಸಿ ವಿತರಿಸಬೇಕೆ ಹೊರತು ಖರೀದಿಸುವಂತಿಲ್ಲ.
*ಈ ಹಿಂದೆ ನೀಡಿರುವ ಆದೇಶದಂತೆ ವಾರಕ್ಕೊಮ್ಮೆ ಪ್ರತಿ ಶನಿವಾರ ಗೋಧಿ ಬಳಕೆ ಮಾಡಿ ಉಪ್ಪಿಟ್ಟು/ಚಪಾತಿ/ಪಾಯಸ/ಪೂರಿ ತಯಾರಿಸಿ ವಿತರಿಸಬೇಕು.
* ಶನಿವಾರದಂದು ತೊಗರಿ ಬೇಳೆಯನ್ನು ಬಳಸಬಾರದು.
* ಅಡುಗೆಗೆ ಡಬಲ್ಫೋರ್ಟಿಫೈಡ್ ಉಪ್ಪನ್ನು ಬಳಸಬೇಕು.
.
*ಅನುಷ್ಠನದಲ್ಲಾಗುವವಿಳಂಬ ಹಾಗೂ ವ್ಯತ್ಯಾಸಗಳಿಗೆ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ, ತಾಲೂಕಾ ಹಂತದಲ್ಲಿ ತಾಲೂಕಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳವರು ಜವಾಬ್ದಾರರಾಗಿರುತ್ತಾರೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಸಿ.ಆರ್.ಪಿ ಗಳ ಜವಾಬ್ದಾರಿಯಾಗಿರುತ್ತದೆ.
*ಅನುಷ್ಠನದಲ್ಲಾಗುವವಿಳಂಬ ಹಾಗೂ ವ್ಯತ್ಯಾಸಗಳಿಗೆ ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು (ಆಡಳಿತ)ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ, ತಾಲೂಕಾ ಹಂತದಲ್ಲಿ ತಾಲೂಕಾ ಪಂಚಾಯತ್ನ ಕಾರ್ಯನಿರ್ವಹಣಾಧಿಕಾರಿಗಳು,ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಅಧಿಕಾರಿಗಳವರು ಜವಾಬ್ದಾರರಾಗಿರುತ್ತಾರೆ. ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಸಿ.ಆರ್.ಪಿ ಗಳ ಜವಾಬ್ದಾರಿಯಾಗಿರುತ್ತದೆ.
*ಅಕ್ಷರ ದಾಸೋಹ ಕಾರ್ಯಕ್ರಮದ ಮಾರ್ಗಸೂಚಿ ಪುಸ್ತಕದಲ್ಲಿ ಸೂಚಿಸಿರುವಂತೆ ಅಡುಗೆ ಸಿಬ್ಬಂದಿಯ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಗಳಲ್ಲಿ ಯಾವುದೇ ಲೋಪಗಳು ಉಂಟಾಗಿದ್ದಲ್ಲಿ ಅಡುಗೆ ಸಿಬ್ಬಂದಿಯವರೇ ನೇರ ಹೊಣೆಗಾರರಾಗಿರುತ್ತಾರೆ. ಇದರ ಮೇಲುಸ್ತುವಾರಿಯನ್ನು ಎಸ್.ಡಿ.ಎಂ.ಸಿ. ನಿರ್ವಹಿಸಬೇಕು.
__________________________________________
ಮಧ್ಯಾಹ್ನ ಉಪಹಾರ ಯೋಜನೆ
- CONTENTS
- ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ
- ಉದ್ದೇಶಗಳು
- ಅನುಷ್ಠಾನದ ಜವಾಬ್ದಾರಿ
- ಶಾಲಾ ಮಟ್ಟದಲ್ಲಿ ಸುರಕ್ಷತೆ
- ತಾಲ್ಲೂಕು ಮಟ್ಟ
- ಜಿಲ್ಲಾ ಮಟ್ಟ
- ರಾಜ್ಯ ಮಟ್ಟ
- ಸೂಚಿತ ಆಹಾರ ಪಟ್ಟಿ
- ಪೌಷ್ಠಿಕಾಂಶದ ವಿವರ
- ಅಡುಗೆ ಕೋಣೆಗಳ ವಿವರ
- ಪಾತ್ರೆ ಪರಿಕರಗಳ ಖರೀದಿ ಬಗ್ಗೆ
- ಅಡುಗೆ ಸಿಬ್ಬಂದಿ ವಿವರ
- ಅಗ್ನಿ ನಂದಕಗಳ ಅಳವಡಿಕೆ
- ಅಡುಗೆ ಕೇಂದ್ರಗಳ ವಿವರ
- ಅಡುಗೆಯವರ ಆಯ್ಕೆ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ಆರೋಗ್ಯ ಇಲಾಖೆ
- ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ
- ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
- ಭಾರತೀಯ ಆಹಾರ ನಿಗಮ
- ಆಯವ್ಯಯ
- ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ
- ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಆಚರಣೆಗಳು
- ಸ್ವಯಂ ಸೇವಾ ಸಂಸ್ಥೆಗಳ ಪಾತ್ರ
- ಸ್ವಯಂ ಸೇವಾ ಸಂಸ್ಥೆಗಳು
ಮಧ್ಯಾಹ್ನಉಪಹಾರ ಯೋಜನೆಯು ನಡೆದು ಬಂದ ದಾರಿ
2002-03ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.
- 2003-04 ನೇ ಸಾಲಿನಿಂದ ಉಳಿದ 20 ಜಿಲ್ಲೆಗಳಿಗೂ ವಿಸ್ತರಿಸಲಾಯಿತು.
- ದಿನಾಂಕ 01-09-2004 ರಿಂದ ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ವಿಸ್ತರಿಸಲಾಯಿತು.
- ದಿನಾಂಕ 01-10-2004 ರಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ 6 ಮತ್ತು 7 ನೇ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗಿದೆ.
- 2007-08ನೇ ಸಾಲಿನಿಂದ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಿಗೂ ವಿಸ್ತರಿಸಲಾಯಿತು. ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳೆಲ್ಲರಿಗೂ ಮಧ್ಯಾಹ್ನ ಉಪಹಾರವನ್ನು ಒದಗಿಸಲಾಯಿತು. 1 ರಿಂದ 8ನೇ ತರಗತಿಯವರೆಗೆ ಕೇಂದ್ರ ಸರ್ಕಾರದಿಂದ ಹಾಗೂ 9 ಮತ್ತು 10 ನೇ ತರಗತಿಗಳಿಗೆ ರಾಜ್ಯ ಸರ್ಕಾರದ ನೆರವಿನಿಂದ ಮಧ್ಯಾಹ್ನ ಬಿಸಿಯೂಟವನ್ನು ಒದಗಿಸಲಾಯಿತು.
- ದಿನಾಂಕ:01-08-2013ರಿಂಧ 1-10ನೇ ತರಗತಿಯ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಪ್ರತೀ ವಿದ್ಯಾರ್ಥಿಗೂ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಎಂ.ಎಲ್. ಹಾಲನ್ನು ನೀಡಲಾಗುತ್ತಿದೆ.
ಉದ್ದೇಶಗಳು
- ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸುವುದು.
- ಶೈಕ್ಷಣಿಕ ವರ್ಷದಲ್ಲಿ ಮಧ್ಯೆ ಮಧ್ಯೆ ಶಾಲೆಯನ್ನು ತೊರೆಯದಂತೆ ತಡೆಯುವುದು.
- ಪೌಷ್ಠಿಕಾಂಶ ಹೆಚ್ಚಿಸುವುದರ ಮೂಲಕ ಶಾಲಾ ಮಕ್ಕಳ ಆರೋಗ್ಯವನ್ನು ಅಭಿವೃದ್ಧಿಗೊಳಿಸುವುದು.
- ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುವುದು.
- ಸಾಮಾಜಿಕ ಸಮಾನತೆಯನ್ನು ಅಭಿವೃದ್ಧಿ ಪಡಿಸಿ ತನ್ಮೂಲಕ ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳಲ್ಲಿ ಮೂಡಿಸುವುದು.
- ಬರಪೀಡಿತ ಪ್ರದೇಶಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯನ್ನು ನೀಡಲಾಗುತ್ತಿದೆ.
ಅನುಷ್ಠಾನದ ಜವಾಬ್ದಾರಿ
ಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.,ಯವರು ಹಾಗೂ ಮುಖ್ಯ ಅಡುಗೆಯವರು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಿರ್ದೇಶನ ಹಾಗೂ ಮಾರ್ಗದರ್ಶಿ ಸೂಚನೆಯಂತೆ ತಾಯಿಯಂದಿರ ಸಮಿತಿಯನ್ನು ಶಾಲೆಗಳಲ್ಲಿ ರಚಿಸಲಾಗಿದ್ದು, ಪ್ರತಿ ದಿನವೂ ಒಬ್ಬ ವಿದ್ಯಾರ್ಥಿಯ ತಾಯಿ ಅಡುಗೆಯ ಮೇಲ್ವಿಚಾರಣೆ ಹಾಗೂ ಊಟದ ರುಚಿ ನೋಡಿ ಬಡಿಸುವುದರಲ್ಲಿ ಪಾಲ್ಗೊಳ್ಳುವುದರ ಮೂಲಕ ಮಕ್ಕಳು ತಮ್ಮ ಮನೆಯ ವಾತಾವರಣದಂತೆ ಭಾವಿಸಿಕೊಂಡು ವರಾಂಡದಲ್ಲಿ/ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯ ಶಿಕ್ಷಕರು/ಶಿಕ್ಷಕರ ಉಸ್ತುವಾರಿ ಊಟ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಶಿಕ್ಷಕರು ಕಡ್ಡಾಯವಾಗಿ ರುಚಿ ನೋಡಿ, ರುಚಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ. ಊಟಕ್ಕೆ ಮುಂಚೆ ಮತ್ತು ನಂತರ ಸೋಪು ಬಳಸಿ ಕೈ ತೊಳೆಯುವ ಉತ್ತಮ ಅಭ್ಯಾಸವನ್ನು ರೂಢಿಸಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಅನುಪಯುಕ್ತ ಹಳೆಯ ವಸ್ತುಗಳನ್ನು ತೆಗೆದು ಹಾಕುವುದು. ಕಾರ್ಯಕ್ರಮದ ಬಗ್ಗೆ ನಿರಂತರ ಗಮನ ಹರಿಸುವುದು. ಅಡುಗೆಯವರು ಅಡುಗೆ ತಯಾರಿಸುವ ಹಾಗೂ ಬಡಿಸುವಾಗ ಏಪ್ರಾನ್ ಬಳಸುವುದು. ನೀರು ಹಾಗೂ ಆಹಾರ ಧಾನ್ಯ , ತರಕಾರಿಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸುವುದು. ಶಾಲಾ ಎಸ್.ಡಿ. ಎಂ.ಸಿ.,ಸಭೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವಿವರಗಳನ್ನು ದಾಖಲಿಸುತ್ತದೆ ಹಾಗೂ ಶಾಲೆಗೆ ಭೇಟಿ ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ವರದಿಯಲ್ಲಿ ದಾಖಲಿಸಬೇಕಾಗಿರುತ್ತದೆ..
ಶಾಲಾ ಮಟ್ಟದಲ್ಲಿ ಸುರಕ್ಷತೆ
ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕಾಯ್ರಕ್ರಮದ ಅನುಷ್ಡಾನದಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುವುದು ಎಲ್ಲಾ ಸ್ಥರದ ಅಧಿಕಾರಿ/ಸಿಬ್ಬಂದಿಯವರ ಜವಾಬ್ದಾರಿಯಾಗಿದ್ದು, ಸುತ್ತೋಲೆ/ಆದೇಶ/ಮಾರ್ಗಸೂಚಿಗಳಂತೆ ಹಾಗೂ ಈ ಕೆಳಗೆ ಸೂಚಿಸಿರುವ ಕರ್ತವ್ಯಗಳಲ್ಲಿನ ಮಕ್ಕಳ ಸುರಕ್ಷತೆಗಾಗಿ ಜವಾಬ್ದಾರಿಗಳನ್ನು ನಿರ್ವಹಿಸುವರು.
ಅಡುಗೆಯನ್ನು ಮಕ್ಕಳಿಗೆ ಊಟ ಬಡಿಸುವ ಅರ್ಧ ಘಂಟೆ ಮುಂಚಿತವಾಗಿ ತಯಾರಿಸಿ ದೊಡ್ಡ ಪಾತ್ರೆಗಳಿಂದ ಚಿಕ್ಕ ಪಾತ್ರೆಗಳಿಗೆ ಬದಲಾಯಿಸಿಕೊಂಡು ಒಂದನೇ ತರಗತಿಯ ಮಕ್ಕಳೂ ಸಹ ಸರಾಗವಾಗಿ ಊಟ ಮಾಡಲು ಸಾಧ್ಯವಾಗುವಷ್ಟು ಬಿಸಿ ಇರುವಂತೆ ನೋಡಿಕೊಂಡು ಬಡಿಸತಕ್ಕದ್ದು. ಅಡುಗೆ ಕೋಣೆಯೊಳಗೆ ಯಾವ ಮಕ್ಕಳೂ ಯಾವುದೇ ಕಾರಣಕ್ಕೂ ಹೋಗದಂತೆ ನಿಷೇಧಿಸುವುದು.ಅಡುಗೆಯವರು ಯಾವುದೇ ಕಾರಣಕ್ಕೂ ದೊಡ್ಡದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು ಊಟ ಬಡಿಸುವುದು. ಕಡ್ಡಾಯವಾಗಿ ಶಾಲಾ ಕಾರಿಡಾರಿನಲ್ಲಿಯೇ ಅಥವಾ ತರಗತಿ ಕೋಣೆಯೋಳಗೆ ಮಕ್ಕಳು ಕುಳಿತು ಊಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು ಊಟವನ್ನು ತಟ್ಟೆಗೆ ಹಾಕಿಸಿಕೊಳ್ಳುವುದನ್ನು ನಿಷೇಧಿಸಿದೆ. ಕಾರಿಡಾರ್ ಅಥವಾ ಕೋಣೆ ಯೊಳಗೆ ಊಟ ಬಡಿಸಬೇಕು. ಮಕ್ಕಳು ಕುಳಿತು ಊಟ ಮಾಡಬೇಕು. ಹೆಚ್ಚು ಮಕ್ಕಳಿದ್ದಲ್ಲಿ ಸರದಿ ಪ್ರಕಾರ ಊಟ ನೀಡುವುದು. ಊಟದ ಬೆಲ್ ಆದ ತಕ್ಷಣ ಆಯಾ ತರಗತಿಯ ಶಿಕ್ಷಕರು ಅವರವರ ತರಗತಿ ಕೋಣೆಯೊಳಗೆ ಧಾವಿಸಿ ಮುಂದೆ ನಿಂತು ಮಕ್ಕಳು ತರಗತಿ ಕೋಣೆಯಿಂದ ಹೊರಟು ಹೊರಗಡೆ ಊಟದ ಕಾರಿಡಾರ್ ವರೆಗೆ ಬಂದು ಕ್ರಮವಾಗಿ ಕುಳಿತುಕೊಂಡು ಊಟವನ್ನು ಪಡೆದು ಊಟಮಾಡಿ ಮತ್ತೆ ಕೈ ತಟ್ಟೆ ತೊಳೆದುಕೊಂಡು ತರಗತಿ ಕೋಣೆಗೆ ಹೋಗಿ ಅವರ ತಟ್ಟೆಗಳನ್ನು ಇಡಲು ಹೋಗುವವರೆಗೆ ಉಸ್ತುವಾರಿ ವಹಿಸಲು ತರಗತಿ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಸೂಕ್ತ ಆದೇಶವನ್ನು ಮೆಮೊ ಮೂಲಕ ನೀಡಲು ಸೂಚಿಸಿದೆ. ತರಗತಿ ಶಿಕ್ಷಕರು ರಜೆ ಇದ್ದಾಗ ಈ ಉಸ್ತುವಾರಿ ಕೆಲಸವನ್ನು ಬೇರೆ ಶಿಕ್ಷಕರಿಗೆ ತಪ್ಪದೇ ಬೆಳಗಿನ ಅವಧಿಯಲ್ಲಿಯೇ ಮುಖ್ಯ ಶಿಕ್ಷಕರು ಮೆಮೊ ಮೂಲಕ ಆದೇಶ ನೀಡಬೇಕು.ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ಮುಖ್ಯಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ಅಡುಗೆಯವರೂ ಕಡ್ಡಾಯವಾಗಿ ಹಾಜರಿದ್ದು, ಮುಂದೆ ನಿಂತು ಊಟದ ಉಸ್ತುವಾರಿ ನಿರ್ವಹಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ
ತಾಲ್ಲೂಕು ಮಟ್ಟ
ತಾಲ್ಲೂಕು ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರ್ ರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ನಲ್ಲಿ ಉಸ್ತುವಾರಿ ಹಾಗೂ ಪರಾಮರ್ಶ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಗಳು ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಅಧೀನದಲ್ಲಿ ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ಕಾರ್ಯಕ್ರಮದ ಅನುಷ್ಠಾನದಲ್ಲಿ ನೆರವಾಗಲು ಕಾರ್ಯನಿರ್ವಹಿತ್ತಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ. ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ. ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.
ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಎಸ್. ಡಿ. ಎಂ. ಸಿ. ಹಾಗೂ ಶಾಲಾ ಮುಖ್ಯಶಿಕ್ಷಕರರುಗಳೊಂದಿಗೆ ಉತ್ತಮ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿ.ಆರ್.ಸಿ.,ಇ.ಸಿ.ಒ./ ಸಿ.ಆರ್.ಪಿ. ಇವರ ಸೇವೆಯನ್ನು ಕಾರ್ಯಕ್ರಮಕ್ಕೆ ಉಪಯೋಗಿಸಿ ಕೊಳ್ಳಬೇಕಾಗುತ್ತದೆ
ಜಿಲ್ಲಾ ಮಟ್ಟ
ಜಿಲ್ಲಾಧಿಕಾರಿಗಳ/ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಮತ್ತು ಪರಾಮರ್ಶನ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ ಹಾಗೂ ಇದರಿಂದ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಸಹಕಾರ ನೀಡಬೇಕು. ಇವರು ಜಿಲ್ಲೆ ಮತ್ತು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಆಹಾರ ಸಾಮಗ್ರಿಗಳು ಹಾಗೂ ಅನುದಾನದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸಂಗ್ರಹಿಸಿ, ಕ್ರೋಢೀಕರಿಸಿ, ರಾಜ್ಯ ಅನುದಾನದ ಯೋಜನೆ ಕೇಂದ್ರ ಕಛೇರಿಯ ಜಂಟಿ ನಿರ್ದೇಶಕರಿಗೆ ತಲುಪಿಸಬೇಕು. ಅಡುಗೆ ಕೋಣೆ ನಿರ್ಮಾಣ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಅಗ್ನಿನಂದಕ ಅಳವಡಿಕೆ ಬಗ್ಗೆ ಗಮನಹರಿಸಿ ಕಡ್ಡಾಯವಾಗಿ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
ರಾಜ್ಯ ಮಟ್ಟ
ರಾಜ್ಯ ಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶ ಸಮಿತಿ, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದು, ಸದರಿ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.
ಸೂಚಿತ ಆಹಾರ ಪಟ್ಟಿ
ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.
ವಾರ/ದಿನ
|
ನಿಗದಿ ಪಡಿಸಿರುವ ಆಹಾರದ ವಿವರ
|
ಸಾಂಬಾರಿಗೆ ಬಳಸಬೇಕಾದ
ತರಕಾರಿ |
ಷರಾ
|
ಸೋಮವಾರ
|
ಅನ್ನ-ಸಾಂಬಾರ್
|
ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು
|
ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ.
ಈ ತರಕಾರಿಗಳೊಂದಿಗೆ ಸ್ಥಳೀಯ ಆಹಾರ ಪದ್ಧತಿಯನ್ವಯ ಸ್ಥಳೀಯವಾಗಿ ಬೆಳೆಯುವ ಇತರೆ ತರಕಾರಿ/ ಗೆಡ್ಡೆ/ಗೆಣಸುಗಳನ್ನು ಬಳಸುವುದು. ಸ್ಥಳೀಯವಾಗಿ ಆಹಾರ ಪದ್ಧತಿಯನ್ವಯವೇ ತರಕಾರಿಗಳನ್ನು ಮತ್ತು ಸಾಂಬಾರು ಪದಾರ್ಥಗಳನ್ನು ಹೊಂದಾಣಿಕೆ ಮಾಡಿಕೊಂಡು ಆಹಾರ ಸಿದ್ಧಪಡಿಸುವುದು. ಸಿದ್ಧ ಪಡಿಸಿದ ಸಾಂಬಾರು ಪದಾರ್ಥ/ಪುಡಿಗಳನ್ನು ಆಗ್ ಮಾರ್ಕ್ ಮುದ್ರೆ/ಪ್ರಮಾಣ ಪತ್ರ ಹೊಂದಿರುವ ತಯಾರಕರಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಬಳಸುವುದು ಅಥವಾ ಉತ್ತಮ ಸಾಮಗ್ರಿಗಳನ್ನು ಬಳಸಿ ಸ್ವಂತವಾಗಿ ತಯಾರಿಸಿ ಬಳಸುವುದು. ಸ್ಥಳೀಯ ಹವಾಮಾನ /ವಾತಾವರಣಕ್ಕೆ ಅನುಗುಣವಾಗಿ ತರಕಾರಿ ಮತ್ತು ಸಾಂಬಾರು ಪದಾರ್ಥಗಳನ್ನು ಬಳಸುವುದು. |
ಮಂಗಳವಾರ
|
ಅನ್ನ-ಸಾಂಬಾರ್
|
ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು
| |
ಬುಧವಾರ
|
ಅನ್ನ-ಸಾಂಬಾರ್
|
ನುಗ್ಗೆಕಾಯಿ,ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು
| |
ಗುರುವಾರ
|
ಅನ್ನ-ಸಾಂಬಾರ್
|
ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು
| |
ಶುಕ್ರವಾರ/
ಭಾನುವಾರ |
ಬಿಸಿಬೇಳೆ ಬಾತ್
|
ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು
| |
ಶನಿವಾರ
|
ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ
|
ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು
|
ಪೌಷ್ಠಿಕಾಂಶದ ವಿವರ
ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 491 (ಅಂದಾಜು) ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 728 (ಅಂದಾಜು) ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.
ಅಡುಗೆ ಕೋಣೆಗಳ ವಿವರ
ಕೇಂದ್ರ ಸರ್ಕಾರವು 2007-08 ನೇ ಸಾಲಿನಲ್ಲಿ 18241 ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲು ಪ್ರತೀ ಅಡುಗೆ ಕೋಣೆಗೆ ರೂ. 60,000/- ದಂತೆ ಒಟ್ಟು 10,944.60 ಲಕ್ಷಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಅನುದಾನವನ್ನು ರಾಜ್ಯ ಸರ್ಕಾರವು ಜುಲೈ-09 ರ ಮಾಹೆಯಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.
ಸೂಚಿತ ನಕ್ಷೆಯಂತೆ, 2007-08ರಲ್ಲಿನ ಎಸ್.ಆರ್. ದರದಂತೆ ಕೇಂದ್ರ ಸರ್ಕಾರವು ನೀಡಿದ ಮೊತ್ತದಲ್ಲಿ ನಿರ್ಮಿಸಲು ರೂ. 1.85 ಲಕ್ಷಗಳು ಬೇಕಾಗುತ್ತದೆ. ಕಟ್ಟಡದ ನಿರ್ಮಾಣದ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರದಿಂದ ಮ್ಯಾಚಿಂಗ್ ಗ್ರ್ಯಾಂಟ್ ಬಳಸಿಕೊಂಡು ಅಡುಗೆ ಕೋಣೆ ಪೂರ್ಣಗೊಳಿಸಲು ಜ್ಞಾಪನ ಹೊರಡಿಸಲಾಗಿದೆ.
2011-12 ನೇ ಸಾಲಿನ ಆರ್ಥಿಕ ವರ್ಷದ ಕೊನೆಯಲ್ಲಿ ಕೇಂದ್ರ ಸರ್ಕಾರವು 8724 ಅಡುಗೆ ಕೋಣೆಗಳನ್ನು ಕೇಂದ್ರ ಮತ್ತು ರಾಜ್ಯದ ಶೇ.75:25 % ರ ಅನುಪಾತದಂತೆ ವಿವಿಧ ಪ್ಲಿಂತ್ ಏರಿಯಾವಾರು ಪ್ರತೀ ಏರಿಯಾಕ್ಕೆ ರೂ. 3.01 ಲಕ್ಷಗಳಂತೆ ಒಟ್ಟಾರೆ ರೂ. 33660.83 ಲಕ್ಷಗಳಿಗೆ ಅನುಮೋದನೆ ನೀಡಿ ಕೇದ್ರ ಸರ್ಕಾರದ ಬಾಬ್ತಾದ ರೂ.25245.62 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಜಿಲ್ಲೆಗಳಿಗೆ ರಾಜ್ಯದ ಪಾಲಾದ ರೂ. 8415.21 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3906 ಅಡುಗೆ ಕೋಣೆಗಳು ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಕೇಂದ್ರದ ಪಾಲು ರೂ.11975.59 ಲಕ್ಷಗಳು ಹಾಗೂ ರಾಜ್ಯದ ಪಾಲು ರೂ.3991.86 ಲಕ್ಷಗಳು ಒಟ್ಟಾರೆ ರೂ.15967.45 ಲಕ್ಷಗಳಾಗಿರುತ್ತದೆ.
2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3906 ಅಡುಗೆ ಕೋಣೆಗಳು ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಕೇಂದ್ರದ ಪಾಲು ರೂ.11975.59 ಲಕ್ಷಗಳು ಹಾಗೂ ರಾಜ್ಯದ ಪಾಲು ರೂ.3991.86 ಲಕ್ಷಗಳು ಒಟ್ಟಾರೆ ರೂ.15967.45 ಲಕ್ಷಗಳಾಗಿರುತ್ತದೆ.
ಪಾತ್ರೆ ಪರಿಕರಗಳ ಖರೀದಿ ಬಗ್ಗೆ
ಕಾರ್ಯಕ್ರಮದ ಪ್ರಾರಂಭದಲ್ಲಿ ಪಾತ್ರೆ ಪರಿಕರ ಹಾಗೂ ಸ್ಟೌ ಖರೀದಿಸಲು ರಾಜ್ಯ ಸರ್ಕಾರವು ಪ್ರತೀ ಅಡುಗೆ ಕೇಂದ್ರಕ್ಕೆ ರೂ.5000/- ರಂತೆ ಅನುದಾನ ನೀಡಿದೆ. 2006-07 ನೇ ಸಾಲಿನಿಂದ ಕೇಂದ್ರ ಸರ್ಕಾರವು ಪಾತ್ರೆ ಹಾಗೂ ಸ್ಟೌ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದ್ದು, ಅದರ ವಿವರ ಕೆಳಕಂಡಂತಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗಿರುವ ಹೊಸ ಅಡುಗೆ ಕೇಂದ್ರಗಳಿಗೆ MME ಅಡಿಯಲ್ಲಿ 1283 ಪ್ರಾಥಮಿಕ ಕೇಂದ್ರಗಳಿಗೆ ರೂ. 5000/- ನಂತೆ 64.15 ಲಕ್ಷಗಳನ್ನು 1023 ಪ್ರೌಢ ಶಾಲೆಗಳಿಗೆ (ರೂ.7500/-ರಂತೆ) ಒಟ್ಟು 77.40 ಲಕ್ಷಗಳನ್ನು ಬಿಡುಗಡೆಗೊಳಿಸಿ, ವೆಚ್ಚ ಭರಿಸಲಾಗಿದೆ.
ಅಡುಗೆ ಸಿಬ್ಬಂದಿ ವಿವರ
ಒಟ್ಟು ಕೇಂದ್ರ ಸರ್ಕಾರದಿಂದ 1,17,842 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,18,842 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಅಡುಗೆಯವರನ್ನು ಎನ್.ಜಿ.ಓ ನೀಡುತ್ತಿರುವ ಶಾಲೆಗಳಿಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಗೌರವಧನನ್ನು ಮುಖ್ಯ ಅಡುಗೆಯವರಿಗೆ ರೂ.1100/- ಮತ್ತು ಸಹಾಯಕರಿಗೆ ರೂ.1000/- ಗಳನ್ನು ನಿಗದಿಪಡಿಸಲಾಗಿತ್ತು.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಗೌರವಧನನ್ನು ಮುಖ್ಯ ಅಡುಗೆಯವರಿಗೆ ರೂ.1100/- ಮತ್ತು ಸಹಾಯಕರಿಗೆ ರೂ.1000/- ಗಳನ್ನು ನಿಗದಿಪಡಿಸಲಾಗಿತ್ತು.
- ಕೇಂದ್ರ ಸರ್ಕಾರ ದಿನಾಂಕ:1-12-2009 ರಿಂದ ಅಡುಗೆ ತಯಾರಿಕೆಗೆ ಸಂಭಾವನೆಯನ್ನು ತಿಂಗಳಿಗೆ ರೂ.1000/- ದಂತೆ ನಿಗದಿಗೊಳಿಸಿದೆ. ಸದರಿ ಸಂಭಾವನೆಯನ್ನು ಕೇಂದ್ರ ಸರ್ಕಾರ ಶೇ.75, ರಾಜ್ಯ ಸರ್ಕಾರ ಶೇ.25ರ ಆಧಾರದಲ್ಲಿ ಪಾವತಿಸುತ್ತಿದೆ. ಮುಖ್ಯ ಅಡುಗೆಯವರಿಗೆ ಹೆಚ್ಚುವರಿಯಾಗಿ ರೂ.100/- ಗಳನ್ನು ರಾಜ್ಯ ಸರ್ಕಾರವು ಭರಿಸುತ್ತಿದೆ. ಕ್ಷೀರಭಾಗ್ಯ ಯೋಜನೆಯಡಿ ಮಾಸಿಕ ರೂ.100/- ಪ್ರತೀ ಅಡುಗೆ ಸಿಬ್ಬಂದಿಗೆ ನೀಡಲಾಗುತ್ತಿದೆ.
- ದಿನಾಂಕ:1-1-2014 ರಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರವು ಅಡುಗೆಯವರ ಗೌರವ ಸಂಭಾವನೆಯನ್ನು ರೂ.500/- ಗಳನ್ನು ಹೆಚ್ಚಿಸಿದ್ದು, ಪ್ರಸ್ತುತ ಮುಖ್ಯ ಅಡುಗೆಯವರಿಗೆ ಮಾಸಿಕ ರೂ.1700/- ಹಾಗೂ ಸಹಾಯಕ ಅಡುಗೆಯವರಿಗೆ ರೂ.1600/- ಗಳನ್ನು ನೀಡಲಾಗುತ್ತಿದೆ.
- ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಅಡುಗೆ ತಯಾರಿಸುವ ಸಂದರ್ಭದಲ್ಲಿ ಸುಟ್ಟಗಾಯಗಳಾದಲ್ಲಿ ರೂ.30,000/- ಗಳನ್ನು, ಅಂಗವಿಕಲತೆ ಉಂಟಾದಲ್ಲಿ ರೂ.75,000/- ಗಳನ್ನು ಮತ್ತು ಸುಟ್ಟಗಾಯಗಳಾಗಿ ಮರಣ ಹೊಂದಿದರೆ ರೂ.1.00 ಲಕ್ಷ ಪರಿಹಾರ ನೀಡಲಾಗುತ್ತಿದೆ.
ಅಗ್ನಿ ನಂದಕಗಳ ಅಳವಡಿಕೆ
ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:13-04-2009 ರಲ್ಲಿನ ತೀರ್ಪಿನಂತೆ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಅನಾಹುತಗಳನ್ನು ತಡೆಯುವ ಸಲುವಾಗಿ ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಲು ಆದೇಶವಾಗಿರುತ್ತದೆ.
ಅದರಂತೆ, ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಈಗಾಗಲೇ ಬಂದಿರುವ ಮಾಹಿತಿಯಂತೆ ಶೇ.99.8 ರಷ್ಟು ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆ. ಕಡ್ಡಾಯವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಮತ್ತೊಮ್ಮೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಸಹಕಾರವನ್ನು ಪಡೆದು ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ ತರಬೇತಿಯನ್ನು ಏರ್ಪಡಿಸಲು ಸಹ ಸೂಚಿಸಿದೆ. ಪೌಡರ್ ಬದಲಾಯಿಸಲು ಶಾಲಾ ಸಂಚಿತ ನಿಧಿಯಲ್ಲಿ ಹಣ ಬಳಸಲು ಅನುಮತಿ ನೀಡಲಾಗಿದೆ. ಅದರಂತೆ ಅಗ್ನಿ ನಂದಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಕಡ್ಡಾಯವಾಗಿದೆ.
ಅಡುಗೆ ಕೇಂದ್ರಗಳ ವಿವರ
ರಾಜ್ಯದಲ್ಲಿ ಒಟ್ಟು .........ಅಡುಗೆ ಕೇಂದ್ರಗಳಿದ್ದು, ಈ ಕೆಳಕಂಡಂತೆ ಅಡುಗೆ ಕೇಂದ್ರಗಳನ್ನು ವರ್ಗೀಕರಿಸಲಾಗಿದೆ.
ಕ್ರ. ಸಂ. | ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ | ||||
ಮಕ್ಕಳಸಂಖ್ಕೆ | ಕೇಂದ್ರದ ಮಾದರಿ | ಅಡುಗೆಯವರ ಸಂಖ್ಯೆ | |||
1
|
1 ರಿಂದ 25 ರವರೆಗೆ
|
ಎ
|
1
| ||
2
|
26 ರಿಂದ 100 ರವರೆಗೆ
|
ಬಿ
|
2
| ||
3
|
101 ರಿಂದ 200 ರವರೆಗೆ
|
ಸಿ
|
3
| ||
4
|
201 ರಿಂದ 300 ರವರೆಗೆ
|
ಡಿ
|
4
| ||
5
|
301 ರಿಂದ 500 ರವರೆಗೆ
|
ಇ
|
5
| ||
6
|
501 ರಿಂದ 800 ರವರೆಗೆ
|
ಎಫ್
|
6
| ||
7
|
801 ರಿಂದ 1100 ರವರೆಗೆ
|
ಜಿ
|
7
| ||
8
|
1101 ರಿಂದ 1400 ರವರೆಗೆ
|
ಹೆಚ್
|
8
| ||
9
|
1401 ರಿಂದ 1700 ರವರೆಗೆ
|
ಐ
|
9
| ||
10
|
1701 ರಿಂದ 25 ಮೇಲ್ಪಟ್ಟು
|
ಜೆ
|
10
|
ಅಡುಗೆಯವರ ಆಯ್ಕೆ
ಆಯ್ಕೆ ಸಮಿತಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.
- ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಮುನ್ಸಿಪಾಲಿಟಿ/ಪಟ್ಟಣ ಕಾರ್ಪೋರೇಷನ್ ವಾರ್ಡ್ ನ ಸದಸ್ಯರು ಈ ಸಮಿತಿಯ ಅಧ್ಯಕ್ಷರಾಗಿರಬೇಕು.
- ಎಸ್. ಡಿ. ಎಂ. ಸಿ. ಅಧ್ಯಕ್ಷರು-ಸದಸ್ಯರು,
- ಶಾಲಾ ಮುಖ್ಯಸ್ಥರು-ಸದಸ್ಯರು.
- ಪಟ್ಟಣ ಕಾರ್ಪೋರೇಷನ್ನಿನ ಮುಖ್ಯಾಧಿಕಾರಿ /ಮುನ್ಸಿಪಾಲಿಟಿಯ ಪ್ರಧಾನ ಕಾರ್ಯದರ್ಶಿ/ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಇವರಲ್ಲಿ ಯಾರಾದರೂ ಸಮಿತಿಯ ಕಾರ್ಯದರ್ಶಿಯಾಗಿರಬೇಕು.
ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು.
- ಗ್ರಾಮ ಪಂಚಾಯತಿಯ ಅಧ್ಯಕ್ಷರು/ಪಟ್ಟಣ ಕಾರ್ಪೋರೇಷನ್ನಿನ ವಾರ್ಡ್ ಸದಸ್ಯರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಪ್ರಾಥಮಿಕ ಸಭೆಯು ನಡೆಯುವುದು.
- ಒಂದು ಶಾಲೆಗಿಂತ ಹೆಚ್ಚಿನ ಶಾಲೆಗಳಲ್ಲಿ ಅಡುಗೆ ಕೇಂದ್ರ ತೆರೆಯಬೇಕಾದ ಸಂದರ್ಭದಲ್ಲಿ ಆಯಾ ಶಾಲಾ ಮುಖ್ಯಸ್ಥರು ಆ ಸಭೆಯ ವಿಶೇಷ ಆಹ್ವಾನಿತರಾಗಿರುವುದು.
- ಈ ಸಭೆಯಲ್ಲಿ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕುರಿತು ಚರ್ಚಿಸುವುದು ಮತ್ತು ಅರ್ಜಿ ಅಹ್ವಾನಿಸುವ ಹಾಗೂ ನೇಮಕಾತಿಯ ದಿನಾಂಕಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು.
- ಅರ್ಜಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಸಭಾ ನಡಾವಳಿಯನ್ನು ಅನುಸರಿಸುವುದು.
- ವಿದ್ಯಾರ್ಹತೆ, ಕಾಲಾವಧಿ ಮತ್ತು ಅಡುಗೆ ಸಿಬ್ಬಂದಿಯನ್ನು ನೇಮಕಾತಿ ಮಾಡಲು ನೀಡುವ ಸಂಭಾವನೆ ಕುರಿತಾದ ವಿವರಗಳನ್ನು ಗ್ರಾಮ ಪಂಚಾಯಿತಿಯು ಹತ್ತು ದಿನಗಳಿಗೆ ಮೊದಲೇ ಸೂಚನಾ ಫಲಕದಲ್ಲಿ ಸೂಚಿಸುವುದು.
- ಮುಖ್ಯ ಅಡುಗೆಯವರೂ ಸೇರಿದಂತೆ ಉಳಿದ ಅಡುಗೆಯವರೆಲ್ಲರೂ ಮಹಿಳೆಯರಾಗಿರಬೇಕು.
- ಮುಖ್ಯ ಅಡುಗೆಯವರ ವಿದ್ಯಾರ್ಹತೆ ಕನಿಷ್ಠ ಏಳನೇ ತರಗತಿ ತೇರ್ಗಡೆಯಾಗಿರಬೇಕು. ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯು ಅದೇ ಗ್ರಾಮಕ್ಕೆ ಸೇರಿದವರೆಂದು ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳಿಂದ ದೃಢೀಕರಿಸುವುದು.
- ಅಡುಗೆ ಸಿಬ್ಬಂದಿ ಸಹಾಯಕರಿಗೆ ವಿದ್ಯಾರ್ಹತೆಯನ್ನು ನಿಗದಿ ಪಡಿಸಿರುವುದಿಲ್ಲ. ಆದರೆ ಅಕ್ಷರಸ್ಥರಿಗೆ ಆದ್ಯತೆ ನೀಡುವುದು.
- ಮುಖ್ಯ ಅಡುಗೆಯವರು/ಅಡುಗೆಯವರನ್ನು ಆರಿಸುವಾಗ 30 ವರ್ಷ ವಯಸ್ಸಿನ ಹಾಗೂ ಅದೇ ಗ್ರಾಮಕ್ಕೆ ಸೇರಿದ ಮಹಿಳೆಯರಿಗೆ ಆದ್ಯತೆ ನೀಡುವುದು.
- ಆಯ್ಕೆಯ ಸಂದರ್ಭದಲ್ಲಿ ವಿಧವೆಯರು ಹಾಗೂ ನೊಂದ ಮಹಿಳೆಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದು.
- ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಪ.ಜಾ./ಪ.ಪಂ.ಕ್ಕೆ ಸೇರಿದವರನ್ನೇ ಆಯ್ಕೆ ಮಾಡಬೇಕು.
- ಎ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು ಹಾಗೂ ಮತ್ತೊಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು.
- ಬಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಹಾಗೂ ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿರಬೇಕು.
- ಸಿ-1 ಮಾದರಿಯ ಅಡುಗೆ ಕೇಂದ್ರಗಳಿಗೆ ಅಡುಗೆಯವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಒಬ್ಬರು ಪ.ಜಾ./ಪ.ಪಂ.ಕ್ಕೆ ಸೇರಿದವರು, ಇನ್ನೊಬ್ಬರು ಹಿಂದುಳಿದ ವರ್ಗಕ್ಕೆ ಮತ್ತು ಮತ್ತೊಬ್ಬರು ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ನಾಲ್ಕನೆಯವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು.
- ಸರ್ಕಾರಕ್ಕೆ ಹೊರೆಯಾಗದಂತೆ ಆಯಾ ಮುನ್ಸಿಪಾಲಿಟಿ ಹಾಗೂ ಸಿಟಿ ಕಾರ್ಪೋರೇಷನ್ ವ್ಯಾಪ್ತಿಗೆ ಒಳಪಡುವ ಸ್ಥಳೀಯ ದಿನಪತ್ರಿಕೆಗಳಲ್ಲಿ ಸಂಪೂರ್ಣ ವಿವರಗಳನ್ನು ಒಳಗೊಂಡ ಉಚಿತ ಸಾರ್ವಜನಿಕ ಪತ್ರಿಕಾ ಪ್ರಕಟಣೆಯನ್ನು ನೀಡುವುದು. ಪ್ರಕಟಣೆಯು ಭಿತ್ತಿ ಪತ್ರ, ಕರ ಪತ್ರ ಹಾಗೂ ಪ್ಲೇ ಕಾರ್ಡ್ ಗಳ ಮೂಲಕವೇ ಇರಬೇಕು.ಸ್ಥಳೀಯವಾಗಿ ಪ್ರಕಟಿಸುವ ಸಂದರ್ಭದಲ್ಲಿ ಸಂದರ್ಶನ ದಿನಾಂಕವನ್ನು ತಪ್ಪದೇ ತಿಳುಸುವುದು.
- ಸಂದರ್ಶನಕ್ಕೆ ಬರುವ ಅಭ್ಯರ್ಥಿಗೆ ಯಾವುದೇ ಪ್ರಯಾಣ ಭತ್ಯೆಯನ್ನು ನೀಡಲಾಗುವುದಿಲ್ಲ.
- ಸಂದರ್ಶನಕ್ಕೆ ಹಾಜರಾಗುವ ಸಂದರ್ಭದಲ್ಲಿ ವಿದ್ಯಾರ್ಹತೆಗೆ ಸಂಬಂಧಿಸಿದ ಮೂಲ ಅಂಕ ಪಟ್ಟಿಯನ್ನು ಜೆರಾಕ್ಸ್ ದ್ವಿಪ್ರತಿಯಲ್ಲಿ, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರಗಳನ್ನು ತರುವುದು.
- ಆಯ್ಕೆ ಸಮಿತಿಯು ಸಂದರ್ಶನದ ವೇಳೆಯಲ್ಲಿ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು.
- ಸಭೆಯಲ್ಲಿ ತೀರ್ಮಾನಿಸಲಾದ ಸಭಾ ನಡಾವಳಿಗಳನ್ನು ದಾಖಲಿಸುವುದು. ಮೀಸಲಾತಿಯ ಪಟ್ಟಿಯನ್ನು ಸಭಾ ನಡಾವಳಿಯೊಂದಿಗೆ ಲಗತ್ತಿಸುವುದು. ಆದ್ಯತೆಯ ಮೇರೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವುದು. ಮುಖ್ಯ ಅಡುಗೆಯವರು ಯಾವುದೇ ವೈಯಕ್ತಿಕ ಕಾರಣಗಳಿಂದ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ಆಯ್ಕೆ ಮಾಡಬಹುದು.
- ಮೇಲ್ಕಾಣಿಸಿದ ಎರಡು ಆಯ್ಕೆ ಪಟ್ಟಿಯನ್ನು ಅಂತಿಮ ಅನುಮೋದನೆಗಾಗಿ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಕಳುಹಿಸತಕ್ಕದ್ದು.
- ಮೇಲ್ಕಾಣಿಸಿದ ಮಾನದಂಡಗಳನ್ನು ಬಳಸಿ, ಪಾರದರ್ಶಕವಾಗಿ ಆಯ್ಕೆ ಮಾಡುವುದು.
- ಮಾರ್ಗಸೂಚಿಯಂತೆ ಆಯ್ಕೆ ಮಾಡದಿದ್ದಲ್ಲಿ, ಯಾವುದೇ ದೂರು ಬಂದಾಗ ಆಯ್ಕೆ ಪಟ್ಟಿಯನ್ನು ನಿರಾಕರಿಸುವ ಅಧಿಕಾರವನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಗೆ ನೀಡಲಾಗಿದೆ.
ಅಡುಗೆಯವರ ಸಂಭಾವನೆ
ವರ್ಗ | ಮಕ್ಕಳ ಸಂಖ್ಯೆ | ಅಡುಗೆಯವರ ಸಂಖ್ಯೆ | ಸಂಭಾವನೆ |
---|---|---|---|
ಎ-1 |
1-25
|
1
|
ಮು.ಅ.-ರೂ.1700/-ಅ.ಸಹಾಯಕರಿಗೆ-ರೂ.1600/-
|
ಎ |
26- 70
|
2
| |
ಬಿ |
71 - 300
|
3
| |
ಸಿ |
301 ಕ್ಕಿಂತ ಮೇಲ್ಪಟ್ಟು
|
4
|
ವರ್ಗ | ಮಕ್ಕಳ ಸಂಖ್ಯೆ | ಅಡುಗೆಯವರ ಸಂಖ್ಯೆ | ಸಂಭಾವನೆ |
---|---|---|---|
ಹಿ.ಪ್ರಾ.ಕ್ಕೆ ಸೇರಿಸಿದಂತೆ |
1 - 300
|
1
|
ಮು.ಅ.-ರೂ.1700/- ಅ.ಸಹಾಯಕರಿಗೆ-ರೂ.1600/-
|
ಎ |
301 - 500
|
4
| |
ಬಿ |
501 - 1000
|
5
| |
ಸಿ |
1001 ಕ್ಕೂ ಮೇಲ್ಪಟ್ಟು
|
6
|
- ಅಡುಗೆ ಸಿಬ್ಬಂದಿಯ ಅಂತಿಮ ಆಯ್ಕೆ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆಯುವುದು.
- ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ/ತತ್ಸಮಾನ ಅಧಿಕಾರಿಯವರಿಂದ ಅನುಮೋದನೆ ಪಡೆದು, ಅಂತಿಮವಾಗಿ ಆಯ್ಕೆಯಾದ ಅಡುಗೆ ಸಿಬ್ಬಂದಿಗೆ ಅನುಸೂಚಿ-ಇನಲ್ಲಿ ಸೂಚಿಸಿದಂತೆ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ/ತತ್ಸಮಾನ ಅಧಿಕಾರಿಯವರು ನೇಮಕಾತಿ ಆದೇಶವನ್ನು ನೀಡುವುದು.
- ಆಯ್ಕೆಯಾದ ಅಡುಗೆ ಸಿಬ್ಬಂದಿಯು ಕರ್ತವ್ಯಕ್ಕೆ ಹಾಜರಾಗುವ ಮುನ್ನ ರೂ.10/- ಬಾಂಡ್ ಪೇಪರ್ ನಲ್ಲಿ ಅನುಸೂಚಿ-ಇ ನಲ್ಲಿ ತಿಳಿಸಿರುವಂತೆ ನಿಯಮ ನಿಬಂಧನೆಗಳಿಗೆ ಒಪ್ಪಿರುತ್ತೇನೆಂದು ಕರಾರು ಪತ್ರವನ್ನು ನೀಡುವುದು.
ತರಬೇತಿಗಳು
ಅಡುಗೆಯವರಿಗೆ ಈ ಕೆಳಕಂಡ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
- ವೈಯಕ್ತಿಕ ಸ್ವಚ್ಛತೆ
- ಎಲ್.ಪಿ.ಜಿ.ಗ್ಯಾಸ್ ಬಳಕೆ
- ಅಡುಗೆ ಕೋಣೆ ಸ್ವಚ್ಛತೆ
- ಬೇಳೆ ಮತ್ತು ತರಕಾರಿಗಳ ಬಳಕೆಯಿಂದ ರುಚಿಕರ ಮತ್ತು ಪೌಷ್ಠಿಕ ಆಹಾರ ತಯಾರಿಕೆ.
- ಸುರಕ್ಷಿತವಾಗಿ ಮಕ್ಕಳಿಗೆ ವಿತರಿಸುವುದು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ್ದಾಗಿರುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೇಡ್-1 ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ಈ ಕಾರ್ಯಕ್ರಮವು ನಡೆಯುತ್ತದೆ.
ತಾಲ್ಲೂಕು ಮಟ್ಟದಲ್ಲಿ ಗ್ರೂಪ್-ಬಿ ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯು ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುತ್ತದೆಆರೋಗ್ಯ ಇಲಾಖೆ
ಮಧ್ಯಾಹ್ನ ಬಿಸಿಯೂಟದ ಜೊತೆಗೆ ಹೆಚ್ಚುವರಿ ಪೌಷ್ಟಿಕಾಂಶವುಳ್ಳ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ. ಇದನ್ನು Karnataka Drugs Logistics and Warehousing Society’ ಯ ಸಹಯೋಗದೊಂದಿಗೆ ಸರಬರಾಜು ಮಾಡಲಾಗುತ್ತಿದೆ. ಮಾತ್ರೆಗಳನ್ನು ಶಿಕ್ಷಣ ಇಲಾಖೆಯಿಂದ ಬಂದ ಬೇಡಿಕೆಗೆ ಅನುಸಾರವಾಗಿ ತಾಲ್ಲೂಕು ಮಟ್ಟದಲ್ಲಿ ಪೂರೈಕೆ ಮಾಡಿದ ನಂತರ ಶಾಲೆಗಳಿಗೆ ಮರುಹಂಚಿಕೆಯಾಗುತ್ತದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯಾಜ್ಯಗಳ ಇಲಾಖೆ
ಈ ಇಲಾಖೆಯು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಎ.ಪಿ.ಎಲ್. ಆಹಾರ ಧಾನ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಬಿಸಿಯೂಟ ಕಾರ್ಯಕ್ರಮಕ್ಕೆ ಬೇಳೆ, ಎಣ್ಣೆ, ಉಪ್ಪು ಇನ್ನಿತರ ಆಹಾರಧಾನ್ಯಗಳನ್ನು ಪೂರೈಸುವ ಜವಾಬ್ದಾರಿ ಹೊಂದಿದ್ದು, ಆಹಾರಧಾನ್ಯಗಳ ಬೇಡಿಕೆಗನುಸಾರ ಯಾವುದೇ ಅಡೆತಡೆಗಳಿಲ್ಲದೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಜವಾಬ್ದಾರಿಯಾಗಿದೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಹಾರಧಾನ್ಯಗಳ ಬೇಡಿಕೆಗೆ ಅನುಸಾರವಾಗಿ 02 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಿ ಮುಂದಿನ ತಿಂಗಳುಗಳಲ್ಲಿ ಸರಬರಾಜು ಮಾಡುವ ಆಹಾರಧಾನ್ಯಗಳ ಬಿಲ್ಲಿಗೆ ಈ ಹಣವನ್ನು ಸರಿದೂಗಿಸುತ್ತದೆ.
ಭಾರತೀಯ ಆಹಾರ ನಿಗಮ
ಭಾರತೀಯ ಆಹಾರ ನಿಗಮವು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡುವ ಅಕ್ಕಿ, ಗೋಧಿಯನ್ನು ಎಫ್.ಸಿ.ಐ. ಗೋದಾಮಿನಲ್ಲಿ ಶೇಖರಿಸಿಟ್ಟುಕೊಂಡು, ಹಂಚಿಕೆ ಮಾಡುವ ಕಾರ್ಯ ನಿಗಮದ್ದಾಗಿರುತ್ತದೆ.
ಆಹಾರ ಸರಬರಾಜಿನಲ್ಲಿ ಯಾವುದೇ ನಿಲುಗಡೆಗೆ ಆಸ್ಪದವಿಲ್ಲದಂತೆ ತ್ರೈಮಾಸಿಕಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಫ್.ಎ.ಕ್ಯೂ. ಆಧಾರದ ಮೇಲೆ ಮಧ್ಯಾಹ್ನ ಉಪಹಾರ ಯೋಜನೆಗೆ ಎಫ್.ಸಿ.ಐ. ಯು ಅತ್ಯುತ್ತಮ ಆಹಾರಧಾನ್ಯಗಳನ್ನು ಸರಬರಾಜು ಮಾಡುತ್ತದೆ.
ಆಹಾರ ಸರಬರಾಜಿನಲ್ಲಿ ಯಾವುದೇ ನಿಲುಗಡೆಗೆ ಆಸ್ಪದವಿಲ್ಲದಂತೆ ತ್ರೈಮಾಸಿಕಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಫ್.ಎ.ಕ್ಯೂ. ಆಧಾರದ ಮೇಲೆ ಮಧ್ಯಾಹ್ನ ಉಪಹಾರ ಯೋಜನೆಗೆ ಎಫ್.ಸಿ.ಐ. ಯು ಅತ್ಯುತ್ತಮ ಆಹಾರಧಾನ್ಯಗಳನ್ನು ಸರಬರಾಜು ಮಾಡುತ್ತದೆ.
ಶಿಕ್ಷಣ ಇಲಾಖೆ, ಭಾರತೀಯ ಆಹಾರ ನಿಗಮದ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಆಹಾರ ಗುಣಮಟ್ಟ ಪರಿಶೀಲನಾ ತಂಡ ಆಹಾರಧಾನ್ಯ ಸರಬರಾಜಿನ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರವಿದೆಯೇ ಎಂದು ಪರಿಶೀಲಿಸಿ ವರದಿ ನೀಡುತ್ತದೆ ಹಾಗೂ ಆಹಾರಧಾನ್ಯಗಳ ಮಾದರಿಯನ್ನಿಟ್ಟುಕೊಂಡು ಪರಿಶೀಲಿಸುತ್ತದೆ.
ಆಯವ್ಯಯ
Share | 2014-15 |
---|---|
ರಾಜ್ಯ |
90518.72 ಲಕ್ಷ
|
ಕೇಂದ್ರ |
83640.93 ಲಕ್ಷ
|
ಒಟ್ಟು |
174159.65 ಲಕ್ಷ
|
04-03-2010ರಿಂದ ಅನ್ವಯಿಸುವಂತೆ ಕೇಂದ್ರ-ರಾಜ್ಯದ ಸರ್ಕಾರದ ಘಟಕ ವೆಚ್ಚದ ವಿವರ :
ವರ್ಗ |
ಅಕ್ಕಿ(ಗ್ರಾಂ.ಗಳಲ್ಲಿ)
| ತಯಾರಿಕಾ ವೆಚ್ಚ(ರೂ.ಗಳಲ್ಲಿ) | ಸಾಗಾಣಿಕಾ ವೆಚ್ಚ(ಕ್ವಿಂ/ ರೂ.ಗಳಲ್ಲಿ) | ||||
---|---|---|---|---|---|---|---|
ಕೇಂದ್ರ
|
ರಾಜ್ಯ
|
ಕೇಂದ್ರ
|
ರಾಜ್ಯ
|
Total
|
ಕೇಂದ್ರ
|
ರಾಜ್ಯ
| |
1 - 5 |
100
|
-
|
2.50
|
0.84
|
3.59
|
75
|
-
|
6 - 8 |
150
|
-
|
3.75
|
1.25
|
5.38
|
75
|
-
|
9 - 10 |
-
|
150
|
-
|
6.62
|
6.62
|
-
|
75
|
ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯ
ಶಾಲೆ, ತಾಲ್ಲೂಕು ಮತ್ತು ಜಿಲ್ಲೆಗಳ ಮಾಹಿತಿಯನ್ನಾಧರಿಸಿ, ಮಧ್ಯಾಹ್ನ ಉಪಹಾರ ಯೋಜನೆಯು ರಾಜ್ಯಮಟ್ಟದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯವನ್ನು ಸಿದ್ಧಪಡಿಸುತ್ತದೆ. ಯೋಜನೆಯು ಮೇಲಿನ ಹಂತಕ್ಕಿಂತಲೂ ಕೆಳಹಂತದಲ್ಲಿ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಶಾಲಾ ಹಂತದ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ ದಾಖಲೀಕರಿಸಲಾಗುವುದು.
ಮಧ್ಯಾಹ್ನ ಉಪಹಾರ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳ ಸಮಗ್ರವಾದ ಪ್ರಸ್ತುತ ಚಿತ್ರಣವನ್ನು ನೀಡುತ್ತದೆ. ಆಡಳಿತಾತ್ಮಕ ರಚನೆ, ಅನುಷ್ಠಾನದ ವಿಧಾನ, ನಿರ್ವಹಣಾ ವಿಧಾನ, ಸಾಮಾಜಿಕವಾಗಿ ಗುರಿಮುಟ್ಟಲು ದೊರೆಯುವ ಮೂಲಭೂತ ಸೌಕರ್ಯಗಳ ಸ್ಥಿತಿ, ಮೌಲ್ಯಮಾಪನದ ಅಧ್ಯಯನದಲ್ಲಿ ದೊರೆಯುವ ಅಂಶಗಳು, ಸಮಸ್ಯೆಯನ್ನು ಎದುರಿಸುವ ಉತ್ತಮ ಅಂಶಗಳು, ಸಮುದಾಯದ ಪಾಲ್ಗೊಳ್ಳುವಿಕೆಯ ಪರಿಶೀಲನೆಯೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳನ್ನು ತಯಾರಿಸಲಾಗುತ್ತದೆ.
ರಾಜ್ಯದಲ್ಲಿ ಅನುಸರಿಸಲ್ಪಡುತ್ತಿರುವ ಉತ್ತಮ ಆಚರಣೆಗಳು
- ಅಡುಗೆ ಅನಿಲ ಬಳಸಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲಾಗುತ್ತಿದೆ.ಇದರಿಂದ ಶಾಲಾ ಪರಿಸರ ಸ್ವಚ್ಛವಾಗಿರುತ್ತದೆ.
- ಮಹಿಳೆಯರನ್ನು ಅಡುಗೆ ಸಿಬ್ಬಂದಿಯರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ.
- ಅಡುಗೆಯರ ನೇಮಕಾತಿ ಸಂದರ್ಭದಲ್ಲಿ ಪ.ಜಾ./ಪ.ವ. ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಮಹಿಳೆಯರನ್ನೇ ಆಯ್ಕೆ ಮಾಡಲಾಗಿದೆ. ಅವರಲ್ಲೂ ವಿಧವೆಯರು ಹಾಗೂ ಜೇವನಾಧಾರವಿಲ್ಲದಿರುವ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತಿದೆ.
- ಎಲ್ಲಾ ವಿದ್ಯಾರ್ಥಿಗಳಿಗೂ ಜಾತಿ-ಮತಗಳ ಬೇಧ-ಭಾವವಿಲ್ಲದೆ ಸರದಿ ಸಾಲಿನಲ್ಲಿ ಕುಳ್ಳಿರಿಸಿ, ಬಿಸಿಯೂಟವನ್ನು ಬಡಿಸಲಾಗುತ್ತದೆ. ಇದರಿಂದ ಸಹಕಾರ ಮನೋಭಾವ, ಸಮಾನತೆ ಮತ್ತು ಭಾವೈಕ್ಯತೆ ಮೂಡಲು ಸಹಕಾರವಾಗುತ್ತದೆ.
- ಊಟಕ್ಕೆ ಮೊದಲು ಮತ್ತು ನಂತರ ವಿದ್ಯಾರ್ಥಿಗಳು ತಮ್ಮ ತಮ್ಮ ಕೈ ಮತ್ತು ತಟ್ಟೆ-ಲೋಟಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸಿಕೊಳ್ಳುವುದು.
- ಪ್ರತೀ ಶಾಲೆಯಲ್ಲಿ ತಾಯಿಯಂದಿರ ಸಮಿತಿ ಇದ್ದು, ತಾಯಿಯಂದಿರುವ ಬಿಸಿಯೂಟ ತಯಾರಿಕೆ ಹಾಗೂ ಬಡಿಸುವ ಸಂದರ್ಭದಲ್ಲಿ ಹಾಜರಿರುತ್ತಾರೆ.
- ಅಡುಗೆ ಸಿಬ್ಬಂದಿಯವರು ಸ್ವಚ್ಛತೆ, ಸುರಕ್ಷತೆ, ಮಿತವ್ಯಯ ಮತ್ತು ಆರೋಗ್ಯದ ಬಗ್ಗೆ ತರಬೇತಿ ನೀಡಲಾಗುತ್ತಿದೆ.
- ಸಾಂಬಾರು ಪದಾರ್ಥ ಮತ್ತು ತರಕಾರಿಗಳ ಖರೀದಿಗಾಗಿ ಮುಂಗಡವಾಗಿ ಅಡುಗೆ ತಯಾರಿಕಾ ವೆಚ್ಚವನ್ನು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಹಾಗೂ ಮುಖ್ಯ ಅಡುಗೆಯವರ ಜಂಟಿ ಖಾತೆಗೆ ಜಮಾ ಮಾಡಲಾಗುತ್ತಿದೆ.
- ಮಾರ್ಚ್-2011 ರಿಂದ ಕುಂದು-ಕೊರತೆಗಳ ಪರಿಹಾರ ಕೋಶವು ತೆರೆಯಲ್ಪಟ್ಟಿದ್ದು, ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ತಲೆದೋರುವ ಸಮಸ್ಯೆಗಳು ಹಾಗೂ ದೂರುಗಳಿಗೆ ತಕ್ಷಣವೇ ಪರಿಹಾರ ನೀಡಲಾಗುವುದು.
ಸ್ವಯಂ ಸೇವಾ ಸಂಸ್ಥೆಗಳ ಪಾತ್ರ
ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದರಲ್ಲಿ ರಾಜ್ಯದ 15ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದ 82 ಅಡುಗೆ ಕೇಂದ್ರಗಳನ್ನು ಹೊಂದಿದ್ದು, ರಾಜ್ಯದಲ್ಲಿ ಪ್ರಸ್ತುತ 80 ಸ್ವಯಂ ಸೇವಾ ಸಂಸ್ಥೆಗಳಿದ್ದು, 1 ರಿಂದ 10ನೇ ತರಗತಿಯವರೆಗಿನ 11,57,833 ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡುತ್ತಿದೆ.
ಸ್ವಯಂ ಸೇವಾ ಸಂಸ್ಥೆಗಳು
ರಾಜ್ಯಾದ್ಯಂತ ಒಟ್ಟು 92 ಸ್ವಯಂ ಸೇವಾ ಸಂಸ್ಥೆಗಳು ಒಟ್ಟು 5768 ಶಾಲೆಗಳ 10.66 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಕಂಡಂತಿವೆ.
ಕ್ರ. ಸಂ.
|
ಸ್ವಯಂ ಸೇವಾ ಸಂಸ್ಥೆಯ ಹೆಸರು
|
ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಗಳು
|
ಶಾಲೆಗಳ ಸಂಖ್ಯೆ
|
ಫಲಾನುಭವಿ ಮಕ್ಕ ಳ ಸಂಖ್ಯೆ
|
1
|
ಅಕ್ಷಯ ಪಾತ್ರ ಫೌಂಡೇಶನ್, ಬೆಂಗಳೂರು.
|
07
|
2478
|
439384
|
2
|
ಅದಮ್ಯ ಚೇತನ, ಬೆಂಗಳೂರು.
|
04
|
694
|
506280
|
3
|
ಅಖಿಲ ಕರ್ನಾಟಕ ಕನ್ನಡ ಕಸ್ತೂರಿ ಕಲಾ ಸಂಘ, ಬೆಂಗಳೂರು.
|
01
|
196
|
28462
|
ಅಧಿಕಾರಿಗಳ ಹೆಸರು & ಪದನಾಮ | ದೂರವಾಣಿ, ಮೊಬೈಲ್ | ಫ್ಯಾಕ್ಸ್ | ಮಿಂಚಂಚೆ ವಿಳಾಸ |
---|---|---|---|
ಶ್ರೀ ಬೆಳ್ಳಶೆಟ್ಟಿ, ಕ.ಆ.ಸೇ ಜಂಟಿ ನಿರ್ದೇಶಕರು(ಮ.ಉ.ಯೋ) | 080-22242943 9449817874, 9480835500 | 080-22271998 | Jd_mms@yahoo.co.in |
- ಸಹಾಯಕ ಪೌಷ್ಠಿಕಾಂಶ ಧಿಕಾರಿ(ಮ.ಉ.ಯೋ) | 080-22271998 | ||
ಗಂಗಾಧರ ಎನ್, ಕ.ಆ.ಸೇ., ಹಿರಿಯ ಸಹಾಯಕ ನಿರ್ದೇಶಕರು(ಮ.ಉ.ಯೋ) | 9480835502 | 080-22271998 | |
ಹಿರಿಯ ಸಹಾಯಕ ನಿರ್ದೇಶಕರು(ಮ.ಉ.ಯೋ) | 9480835503 | 080-22271998 | |
ಟಿ.ಎನ್.ಲಿಂಗೇಗೌಡ, ಸಹಾಯಕ ನಿರ್ದೇಶಕರು(ಮ.ಉ.ಯೋ) | 9480835504 | 080-22271998 | |
ಮುಷೀರ್ ಅಹ್ಮದ್ ಎಂ. ಪತ್ರಾಂಕಿತ ಸಹಾಯಕರು | 9449081789 | 080-22271998 | |
ಲೆಕ್ಕ ಅಧೀಕ್ಷಕರು | 9480835501 | 080-22271998 |
ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ
________________________________________________________
________________________________________________________
ಕ್ಷೀರ ಭಾಗ್ಯ ಯೋಜನೆ
- ಕರ್ನಾಟಕ ಸರ್ಕಾರವು 2013-14 ನೇ ಸಾಲಿನ 01-08-2013 ರಿಂದ 1 ರಿಂದ 10 ನೇ ತರಗತಿ ಓದುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಲ್ಲಾ ಮಕ್ಕಳಗೆ 18 ಗ್ರಾಂ ಕೆನೆಭರಿತ ಹಾಲಿನ ಪುಡಿಯಿಂದ ತಯಾರಿಸಿದ 150 ಮಿ.ಲೀ. ಹಾಲನ್ನು ವಾರದಲ್ಲಿ 03 ದಿನ (ಒಂದು ದಿನ ಬಿಟ್ಟು ಒಂದು ದಿನ ) ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದು, ದಿನಾಂಕ: 01-08-2013 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ ಕ್ಷೀರಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಿದರು.
- ಕ್ಷೀರಭಾಗ್ಯ ಯೋಜನೆಗೆ ಕರ್ನಾಟಕ ಹಾಲು ಮಹಾಮಂಡಳಿಯು ಕಾರ್ಯಕ್ರಮಕ್ಕೆ ಅಗತ್ಯ ಕೆನೆಭರಿತ ಹಾಲಿನ ಪುಡಿಯನ್ನು ಶಾಲಾ ಬಾಗಿಲಿಗೆ ಸರಬರಾಜು ಮಾಡುತ್ತದೆ.
ಮಗುವಿಗೆ ಒಂದು ಬಾರಿಗೆ
ಕ್ರ.ಸಂ. | ಪದಾರ್ಥ/ವಿವರ | ಪರಿಮಾಣ | ಮೊತ್ತ(ರೂ.ಗಳಲ್ಲಿ) |
---|---|---|---|
1 | ಹಾಲಿನ ಪುಡಿ | 18 ಗ್ರಾಂ | 4.59 |
2 | ಸಕ್ಕರೆ | 10 ಗ್ರಾಂ | 0.32 |
3 |
ಇಂಧನ
|
-
| 0.15 |
4 |
ಇತರೆ
| 0.12 | 0.12 |
ಒಟ್ಟು : | 5.18 | ||
ಅಡುಗೆಯವರ ಗೌರವ ಸಂಭಾವನೆ ಮಾಸಿಕ | ರೂ. 100.00 |